ಕಾರು ಪಲ್ಟಿ: ಜಖಂ
ಶಿವಮೊಗ್ಗ: ಚಾಲಕನ ಅಜಾಗರೂಕತೆಯಿಂದ ಕಾರೊಂದು ಪಲ್ಟಿಯಾದ ಘಟನೆ ವಿನೋಬನಗರದ ಶ್ರೀ ರಾಜ್ ಪೆಟೋಲ್ ಬಂಕ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕಾರು ಮಾಲೀಕ ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ ಹಾಕಿಸಿಕೊಂಡುನಿಲ್ಲಿಸಿದ್ದಾರೆ.
ಈ ವೇಳೆ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುವ ಯುವಕನೊಬ್ಬ ಕಾರನ್ನು ಚಲಾಯಿಸಲು ಮುಂದಾಗಿದ್ದಾನೆ.
ಈ ಸಂದರ್ಭದಲ್ಲಿ ಕಾರು ಆಯಾತಪ್ಪಿ ಪಲ್ಟಿಯಾಗಿದೆ. ಕಾರು ಜಖಂ ಗೊಂಡಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ.