ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಷ್ಟ್ರೀಯ ಮಕ್ಕಳ ಮೇಳದಲ್ಲಿ ಸಾಗರದ ವಿದ್ಯಾರ್ಥಿಗಳು

Rashmi Kasaragodu
Updated On : 12 Nov 2013, 11:26 am

ಸಾಗರ: ದೆಹಲಿಯಲ್ಲಿ ನವೆಂಬರ್ 14 ರಿಂದ 20 ರವರೆಗೆ ನಡೆಯಲಿರುವ ರಾಷ್ಟ್ರೀಯ ಮಕ್ಕಳ ಮೇಳದಲ್ಲಿ ಸಾಗರದ ರಾಧಾಕೃಷ್ಣ ಪಬ್ಲಿಕ್ ಶಾಲೆಯ ಕು. ಪ್ರಜ್ವಲ್ ಪಿ. ರಾವ್ ಮತ್ತು ಕು. ನಿಶ್ಚಿತಾ ಟಿ. ಭಾಗವಹಿಸಲಿದ್ದಾರೆ. ಶಾಲೆಯ ಶಿಕ್ಷಕಿ ಸ್ನೇಹಾ ನೇತೃತ್ವದಲ್ಲಿ ದೆಹಲಿಗೆ ತೆರಳಲಿರುವ ಈ ಮಕ್ಕಳು ಅಲ್ಲಿ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಹಾಗೂ ದೆಹಲಿ, ಆಗ್ರಾ, ತಾಜಮಹಲ್ ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಈ ಮಕ್ಕಳು ಅಲ್ಲಿ ಯಶಸ್ವಿಯಾಗಲೆಂದು ಶಾಲೆಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಶುಭಹಾರೈಸಿ ಬೀಳ್ಕೊಟ್ಟಿದ್ದಾರೆ.
ತರಬೇತಿ ಕಾರ್ಯಾಗಾರ
ಶಿವಮೊಗ್ಗ: ಜಿಲ್ಲಾ ತಂಬಾಕು ನಿಯಂತ್ರಣ ಘಟಕವು ನವೆಂಬರ್ 15ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ನ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ತಂಬಾಕು ನಿಯಂತ್ರಣ ಕಾನೂನು ಅನುಷ್ಠಾನದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಏರ್ಪಡಿಸಿದೆ. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಣ್ಣರೆಡ್ಡಿ ಅವರು ಕಾರ್ಯಾಗಾರದಲ್ಲಿ ಉಪಸ್ಥಿತರಿರುವರು.
ಆರೋಗ್ಯದ ನಿರ್ಲಕ್ಷ್ಯ ಸಲ್ಲದು
ಜೋಗ್ಫಾಲ್ಸ್: ಮನುಷ್ಯನಿಗೆ ಆರೋಗ್ಯ ಸಂಪತ್ತು ಶ್ರೇಷ್ಠವಾದುದ್ದು. ಎಷ್ಟೇ ಹಣ, ಸಂಪತ್ತು ಗಳಿಸಿದ್ದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವೆಲ್ಲ ಇದ್ದೂ ಇಲ್ಲದಂತೆ. ಆದ್ದರಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂಬುದಾಗಿ ಡಾ.ನಿರಂಜನ್ ಹೆಗಡೆ ತಿಳಿಸಿದರು. ಅವರು ಕಾರ್ಗಲ್ನ ವಿಪ್ರಕೂಟ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಆರೋಗ್ಯದಲ್ಲಿ ಆಯುರ್ವೇದ ಅವಶ್ಯಕತೆ ಕುರುತು ಉಪನ್ಯಾಸದಲ್ಲಿ, ಆಯುರ್ವೇದದಲ್ಲಿ ವ್ಯಕ್ತಿಗೆ ಚಿಕಿತ್ಸೆ ಪ್ರಧಾನವಾಗಿದ್ದು ರೋಗಕ್ಕೆ ಅಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ದೈಹಿಕ, ಮಾನಸಿಕ, ಧಾರ್ಮಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯದಿಂದ ಜೀವನ ನಡೆಸುವದೇ ಆರೋಗ್ಯ ಎಂಬುದಾಗಿ ತಿಳಿಸಿದ್ದು, ಪಥ್ಯೆಯನ್ನು ರೋಗಿಯು ಪಾಲಿಸುವುದು ಮುಖ್ಯ ಇದನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಶೇ.100 ರಷ್ಟು ಆರೋಗ್ಯವನ್ನು ಕಾಣಬಹುದು ಎಂದರು.
ತಾತ್ಸಾರ ಬೇಡ: ಅಧ್ಯಕ್ಷತೆ ವಹಿಸಿದ್ದ ಗಜಾನನ ಭಟ್, ಇಂದು ಪಾಶ್ಚಾತ್ಯ ರಾಷ್ಟ್ರಗಳು ಶುದ್ಧ ಭಾರತೀಯ ಆಯುರ್ವೇದ ಪದ್ದತಿಯನ್ನು ಅಳವಡಿಕೊಳ್ಳುವ ಮೂಲಕ ರೋಗಮುಕ್ತ ಸಮಾಜವನ್ನು ನಿರ್ಮಾಣಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಆಯುರ್ವೇದ ಪದ್ದತಿ ಬಗ್ಗೆ ಜನರು ತಾತ್ಸಾರ ಭಾವನೆ ಬೆಳಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು. ವೇದಿಕೆಯಲ್ಲಿ ವಿಪ್ರಕೂಟದ ಸಂಚಾಲಕ ಹೂ.ಭಾ. ಅಶೋಕ್ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement