ನೂತನ ಸಭಾಭವನ ಕಟ್ಟಡ ಉದ್ಘಾಟನೆ
ಶಿವಮೊಗ್ಗ: ನವೆಂಬರ್ 13 ಬೆಳಗ್ಗೆ 11 ಗಂಟೆಗೆ ಮೇಲಿನಹನಸವಾಡಿ ಗ್ರಾಪಂ ಆವರಣದಲ್ಲಿ ನೂತನ ಗ್ರಾಮ ಸಭಾಭವನ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸಭಾಭವನದ ಉದ್ಘಾಟಿಸುವರು.
ಮೇಲಿನ ಹನಸವಾಡಿ ಗ್ರಾಪಂ ಅಧ್ಯಕ್ಷ ಆರ್. ಜಗದೀಶ್ ಅಧ್ಯಕ್ಷತೆ ವಹಿಸುವರು. ಸಂಸದ ರಾಘವೇಂದ್ರ, ಆಯನೂರು ಮಂಜುನಾಥ್, ಗೀತಾ ಮಲ್ಲಿಕಾರ್ಜುನ್, ಹೇಮಾಪಾವನಿ ಜನಪ್ರತಿನಿಧಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್ ಹಾಗೂ ತಾಪಂ ಇಒ ರಾಕೇಶ್ ಕುಮಾರ್ ಆಗಮಿಸುವರು.