ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಕ್ಕಳ ಸಮೀಕ್ಷೆ; ಪಂಜಿನ ಮೆರವಣಿಗೆ, ಬೀದಿ ನಾಟಕ

Rashmi Kasaragodu
Updated On : 13 Nov 2013, 11:20 am

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ನ.12
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ 2013-14 ಕುರಿತು ಸ್ಪಂದನ ತಂಡ ನಗರದಲ್ಲಿ ಮಂಗಳವಾರ ಸಂಜೆ ಪಂಜಿನ ಮೆರವಣಿಗೆ ಹಾಗೂ ಬೀದಿ ನಾಟಕ ಪ್ರದರ್ಶಿಸಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿವೈಪಿಸಿಕೆ ಗಣಪತಿ ಪಂಜಿನ ಮೆರಣಿಗೆಗೆ ಚಾಲನೆ ನೀಡಿದರು. ಶಂಕರಮಠದಿಂದ ಹೊರಟ ಮೆರವಣಿಗೆ ಓಂ ಗಣೇಶ್ ಶೋರೂಂ ಬಳಿ ಸಂಪನ್ನಗೊಂಡಿತು.
ನಂತರ ಸ್ಥಳೀಯ ನಗರಸಭೆ ಸದಸ್ಯೆ ಸುರೇಖಾ ಮುರಳೀಧರ ಅರಿವಿನ ಬೆಳಕು ಎಂಬ ಬೀದಿ ನಾಟಕಕ್ಕೆ ಚಾಲನೆ ನೀಡಿದರು.
ಸ್ಪಂದನ ತಂಡದ ಮುಖ್ಯಸ್ಥ ಅಣ್ಣಪ್ಪ ಒಂಟಮಾಳಗಿ ಅವರ ನೇತೃತ್ವದಲ್ಲಿ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಬೀದಿ ನಾಟಕದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳು ಹಾಗೂ ಕುಟುಂಬದ ಕುರಿತು ಸಮೀಕ್ಷೆ ಮಾಡಲು ಅಧಿಕಾರಿಗಳು ಬರುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂಬ ಸಂದೇಶವನ್ನು ನೀಡಿದರು.
ತಂಡದಲ್ಲಿ ಜಗದೀಶ್, ಜಾನ್ ಪಾಲ್, ವಿನಯ್, ಶಂಕರ್, ಚೈತ್ರ ಮತ್ತಿತರರು ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಲೋಕೇಶಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement