ಮನೆ ಬೀಗ ಮುರಿದು ಚಿನ್ನಾಭರಣ ಅಪಹರಣ
ಶಿವಮೊಗ್ಗ: ಮನೆ ಬೀಗ ಮುರಿದು ಲಕ್ಷಾಂತರ ರುಪಾಯಿ ಚಿನ್ನಾಭರಣ ಹಾಗೂ ನಗದು ಅಪಹರಿಸಿ ಪರಾರಿಯಾದ ಘಟನೆ ತಾಲೂಕಿನ ತ್ಯಾವರೆ ಚಟ್ನಳ್ಳಿಯಲ್ಲಿ ನಡೆದಿದೆ. ಪ್ರಕಾಶ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನಗೆ ಬೀಗ ಹಾಕಿಕೊಂಡು ಹೋಟೆಲ್ ವ್ಯಾಪಾರಕ್ಕೆ ಹೊರ ಹೋಗಿದ್ದರು. ಈ ವೇಳೆ ಕಳ್ಳರು ಚಿನ್ನಾಭರಣ ಹಾಗೂ ರು. 2,72,500 ಲಕ್ಷ ಅಪಹರಿಸಿದ್ದಾರೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ