ನೇತ್ರ ತಪಾಸಣೆ
ತೀರ್ಥಹಳ್ಳಿ: ಇಲ್ಲಿನ ಸ್ಪಂದನಾ ಸೇವಾ ಸಂಸ್ಥೆ ಉಚಿತ ನೇತ್ರ ತಪಾಸಣಾ ಶಿಬಿರ ಹಮಿಕೊಂಡಿತ್ತು. 250ಕ್ಕೂ ಹೆಚ್ಚು ಜನರು ಶಿಬಿರದ ಉಪಯೋಗ ಪಡೆದುಕೊಂಡರು. 35 ಜನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದು, ಶಂಕರ ಕಣ್ಣಿನ ಆಸ್ಪತೆಯಲ್ಲಿ ಇವರಿಗೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಸ್ಪಂದನ ಸಂಸ್ಥೆಯ ನಿಶ್ಚಲ್, ಹಬೀಬ್, ಮತ್ತು ಸದಸ್ಯರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.
ರಕ್ತದಾನ ಶಿಬಿರ
ತೀರ್ಥಹಳ್ಳಿ : ತಾಲೂಕು ಮೊಗವೀರ ಮಹಾಜನ ಸಂಘ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಶಂಕರ್ ಫ್ಯಾಮಿಲಿ ಟ್ರಸ್ಟ್, ಮಣಿಪಾಲ ರಕ್ತನಿಧಿ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಸಹಯೋಗದಲ್ಲಿ ನಡೆದ ಈ ಶಿಬಿರದ ಉದ್ಘಾಟನೆ ಸಚಿವ ಕಿಮ್ಮನೆ ರತ್ನಾಕರ್ ಅವರಿಂದ ನೆರವೇರಿತು. ಮಹಿಳೆಯರೂ ಸೇರಿ ಸುಮಾರು 600 ಜನರು ರಕ್ತದಾನ ಮಾಡಿದರು.
ಆರ್ಥಿಕ ಗಣತಿಗೆ ಸಜ್ಜು
ತೀರ್ಥಹಳ್ಳಿ: 6ನೇ ಆರ್ಥಿಕ ಗಣತಿಗೆ ತಾಲ್ಲೂಕು ಆಡಳಿತ ಸಜ್ಜಾಗುತ್ತಿದೆ. ಗ್ರಾಮಂತರ ಪ್ರದೇಶದಲ್ಲಿ 190 ಗಣತಿದಾರರು, 95 ಮೇಲ್ವಿಚಾರಕರು, ಪಟ್ಟಣ ವ್ಯಾಪ್ತಿಯಲ್ಲಿ 13 ಗಣತಿದಾರರು ಈ ಕಾರ್ಯಕ್ಕಾಗಿ ನಿಯೋಜಿತರಾಗಿದ್ದಾರೆ. ಆರ್ಥಿಕ ಗಣತಿಗೆ ಅಗತ್ಯವಿರುವ ಮಾಹಿತಿಯನ್ನು ಗಣತಿದಾರರು ಮನೆಮನೆಗೆ ಭೇಟಿ ನೀಡುವ ಮೂತಕ ಸಂಗ್ರಹಿಸಲಾಗವುದು. ಕ್ಷೇತ್ರಕಾರ್ಯಕ್ಕಾಗಿ ಬರುವ ಗಣತಿದಾರರಿಗೆ ಮಾಹಿತಿ ನೀಡಿ ಸಹಕರಿಸಲು ವಿನಂತಿಸಿದ್ದಾರೆ