ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಹಸಿ ಯುವಕ ವರ್ಗೀಸ್ನಿಂದ ಬಾಲಕಾರ್ಮಿಕ ವಿರೋಧಿ ಸಂಚಾರ

Rashmi Kasaragodu
Updated On : 14 Nov 2013, 11:52 am

ಹೊನ್ನಾಳಿ ಚಂದ್ರಶೇಖರ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ನ.13
ಒಂದು ರಾಯಲ್ ಎನ್ ಫೀಲ್ಡ್ ಬೈಕ್, ನಾಲ್ಕು ರಾಜ್ಯ, 25 ದಿನ, 7 ಸಾವಿರ ಕಿ.ಮೀ., ಒಬ್ಬ ಯುವಕ...
ಇಷ್ಟೇ ಆಗಿದ್ದರೆ ಯಾರೋ ಒಬ್ಬ ಸಾಹಸಿ ಹುಡುಗ ಬೈಕ್ ಹತ್ತಿ ಹೊರಟಿದ್ದಾನೆ ಎಂದು ಸುಮ್ಮನಾಗಬಹುದಿತ್ತು. ಆದರೆ, ರಿಪ್ಪನ್ಪೇಟೆಯ ವಿಜೋ ವರ್ಗೀಸ್ ಎಂಬ ಯುವಕ ಹೊರಟಿದ್ದು ಜಾಲಿ ರೈಡ್ ಅಲ್ಲ. ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಬೈಕ್ ಏರಲಿದ್ದಾನೆ ಎಂಬುದು ವಿಶೇಷ.
ವಿಜೋ ಯಾತ್ರೆಯು ಮಕ್ಕಳ ದಿನಾಚರಣೆಯ ನ.14ರಂದು ಬೆಳಿಗ್ಗೆ ರಿಪ್ಪನ್ಪೇಟೆಯಿಂದ ಆರಂಭವಾಗಲಿದ್ದು, 10 ಗಂಟೆಗೆ ಜಿಪಂ ಎದುರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಏಕಾಂಗಿ ಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಸಂಚಾರವು ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಸಾಗಲಿದೆ.
ರೈತನ ಮಗ: ವಿಜೋ ವರ್ಗೀಸ್ ರಿಪ್ಪನ್ಪೇಟೆಯ ರೈತ ವರ್ಗೀಸ್ ಪಿ.ಜೆ. ಅವರ ಪುತ್ರ. ಕಂಪ್ಯೂಟರ್ ಶಿಕ್ಷಣ ಪಡೆದಿದ್ದಾರೆ. ಬೈಕ್ ರೈಡ್ ಅಚ್ಚುಮೆಚ್ಚಿನ ಹವ್ಯಾಸ. ಜತೆಗೆ ಕೃಷಿ ಕೆಲಸವೂ.
ಚಿಕ್ಕಂದಿನಿಂದಲೂ ಅನಾಥ ಮಕ್ಕಳೆಂದರೆ ವಿಜೋಗೆ ಅಕ್ಕರೆ. ನನಗೆ ದಿನಕ್ಕೆ ಮೂರು ಹೊತ್ತು ಊಟ ಮಾಡುವ ಅವಕಾಶವಿದೆ. ಆದರೆ, ಒಂದು ಹೊತ್ತೂ ಊಟ ಸಿಗದ ಮಕ್ಕಳು ಪ್ರಪಂಚದಲ್ಲಿದ್ದಾರೆ ಎನ್ನುವುದಕ್ಕೆ ನೊಂದುಕೊಳ್ಳುವ ವಿಜೋಗೆ ಮಕ್ಕಳು ಕನಿಷ್ಠ ಶಿಕ್ಷಣ ಪಡೆದರೆ ಅವರು ಹೇಗಾದರೂ ಜೀವನ ಕಂಡುಕೊಳ್ಳುತ್ತಾರೆ ಎಂಬ ಆಶಯವಿದೆ. ಬಾಲಕಾರ್ಮಿಕ ಪದ್ಧತಿಯು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ. ಹಾಗಾಗಿ ಶಿಕ್ಷಣ ಬೇಕು, ಬಾಲಕಾರ್ಮಿಕರಾಗುವುದು ಬೇಡ ಎಂಬ ಸಂದೇಶವನ್ನು ಹೊತ್ತು ಹೊರಡಲಿದ್ದಾರೆ. ನಾಲ್ಕು ರಾಜ್ಯಗಳ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನೇ ಗುರಿಯಾಗಿಟ್ಟುಕೊಂಡು ಸಂಚಾರ ನಡೆಸಲಿದ್ದಾರೆ.
ವಿಜೋ ಹೇಳಿದ್ದು: ಮಕ್ಕಳನ್ನು ಶೋಷಣೆಯಿಂದ ಮುಕ್ತ ಮಾಡಬೇಕು. ಅದಕ್ಕಾಗಿ ನನ್ನ ಪಯಣ. ಎಲ್ಲಿ ಊಟ ಮಾಡಬೇಕು, ಎಲ್ಲಿ ಮಲಗಬೇಕು ಎಂಬ ಯಾವ ಯೋಜನೆಯನ್ನೂ ಮಾಡಿಕೊಂಡಿಲ್ಲ. ನನ್ನ ತಂದೆಯೇ ನನ್ನ ಈ ಪಯಣಕ್ಕೆ ಪ್ರೇರಣೆ. ಅಲ್ಲದೇ ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಆದಷ್ಟು ಹೆಚ್ಚು ಶಾಲೆಗಳನ್ನು ಸಂಪರ್ಕಿಸಬೇಕೆನ್ನುವುದೇ ನನ್ನ ಉದ್ದೇಶ ಎಂದು ವಿಜೋ ವರ್ಗೀಸ್ ಹೇಳುತ್ತಾರೆ.
ಈ ಪಯಣಕ್ಕಾಗಿಯೋ ವಿಜೋ ವಿಶಿಷ್ಟ ಟೀ ರ್ಶ ರೂಪಿಸಿಕೊಂಡಿದ್ದಾರೆ. ಇದರಲ್ಲಿ ಅವರು ಹೇಳಬೇಕಾದ ಸಂದೇಶ, ಸಂಪರ್ಕ ಇತ್ಯಾದಿ ವಿವರಗಳಿವೆ. ಅವರಿಗೆ ನೀವು ಶುಭ ಹಾರೈಸಬೇಕೆಂದರೆ ಎಸ್ಎಂಎಸ್ ಮಾಡಿ- 9482687783. ಇವರ ಪ್ರತಿದಿನದ ಪಯಣದ ಮಾಹಿತಿ ನೋಡಬೇಕೆಂದರೆ ವೀಕ್ಷಿಸಿ- ಢಿಢಿಢಿ.ಜಿಛ್ಛಜಛ್ಟ್ಟ್ಞಿ.್ಛ್ಟಟಢ್ಝಞ್ಟ4711


ಸಾಗುವ ಮಾರ್ಗ
(ಕರ್ನಾಟಕ) ರಿಪ್ಪನ್ ಪೇಟೆ- ಶಿವಮೊಗ್ಗ- ಸಾಗರ- ಹೊನ್ನಾವರ- ಉಡುಪಿ- ಮಂಗಳೂರು- ಕಾಸರಗೋಡು- (ಕೇರಳ) ಕಾಸರಗೋಡು- ಕಣ್ಣೂರು- ಮಾಹಿ- ಕೋಝಿಕೋಡ್ ತ್ರಿಶೂರ್- ಎರ್ನಾಕುಲಂ- ಅಲಪ್ಪಿ- ಕೊಟ್ಟಾಯಂ- ಕೊಲ್ಲಂ- ತಿರುವನಂತಪುರಂ- ನಾಗರಕೋಯಿಲ್-ತಮಿಳುನಾಡು) ಕನ್ಯಾಕುಮಾರಿ- ತೂತುಕುಡಿ- ರಾಮೇಶ್ವರಂ- ಧನುಷ್ಕೋಡಿ- ವೇಲಾಂಗಣಿ- ಪಾಂಡಿಚೇರಿ- ಚೆನೈ- (ಆಂಧ್ರಪ್ರದೇಶ) ನಲ್ಲೂರು- ಮಚಲಿಪಟ್ಟಣಂ- ವಿಶಾಖಪಟ್ಟಣಂ- ವಾರಂಗಲ್ ನಿಜಾಮಾಬಾದ್(ಕರ್ನಾಟಕ)- ಬೀದರ್- ಗುಲ್ಬರ್ಗ- ಬೆಳಗಾವಿ- ಕಾರವಾರ- ಸಾಗರ- ಶಿವಮೊಗ್ಗ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement