'ಕ್ರೀಡೆಯಿಂದ ವಿಶ್ವಾಸ ವೃದ್ಧಿ'
ಶಿವಮೊಗ್ಗ: ಕ್ರೀಡೆಯಿಂದ ದೇಹ ಹಾಗೂ ಮನಸ್ಸು ಶಕ್ತಿಶಾಲಿಯಾಗುತ್ತದೆ. ಅಲ್ಲದೆ, ಕ್ರೀಡೆ ನಮ್ಮ ಮನಸ್ಸಿಗೆ ಉಲ್ಲಾಸ ತರುವುದರ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸಿ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ನುಡಿದರು.
ಅವರು ಗುರುವಾರ ಸಂಜೆ ರೋವರ್ಸ್ ಕ್ಲಬ್ ಹಾಗೂ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಸಯುಕ್ತಾಶ್ರಯದಲ್ಲಿ ರೋವರ್ಸ್ ಆವರಣದಲ್ಲಿ ಆಯೋಜಿಸಿರುವ 4 ದಿನಗಳ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಆಟ ಆಡುವ ಮೂಲಕ ಉದ್ಘಾಟಿಸಿ, ಪ್ರತಿನಿತ್ಯ ನಮ್ಮ ಜೀವನ ಜಂಜಾಟದಲ್ಲಿ ಕ್ರೀಡೆ ಒಂದು ಅವಿಭಾಜ್ಯ ಅಂಗವಾಬೇಕು.
ನಮ್ಮ ಆಯುಷ್ಯನ್ನು ವೃದ್ಧಿ ಮಾಡಲು, ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಕ್ರೀಡೆ ಒಂದು ಉತ್ತಮ ಸಾಧನವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಹೆಚ್.ಡಿ. ರಮೇಶ್ ಶಾಸ್ತ್ರಿ, 4 ದಿನ ನಡೆಯುವ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳಿಗೆ ವಸತಿ ಹಾಗೂ ಉತ್ತಮ ಊಟದ ಸೌಕರ್ಯವನ್ನು ಕಲ್ಪಿಸಿ ಕ್ರೀಡೆಗೆ ಸಹಕಾರ ನೀಡಲಾಗುತ್ತಿದೆ. ಮುಂಬರುವ ವರ್ಷದಲ್ಲಿ ರಾಷ್ಟ್ರಮಟ್ಟದ ಕ್ರೀಡೆಯನ್ನು ಆಯೋಜಿಸುವುದಾಗಿ ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಆಟಗಾರರಿಗೆ ಅಭಿನಂಧಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಸುಂದರೇಶ್, ಪ್ರಧಾನ ಕಾರ್ಯದರ್ಶಿ ಸುರೇಶ್, ನಿರ್ದೇಶಕ ಪಾಲಾಕ್ಷಿ, ಸಂಚಾಲಕ ಜಿ. ವಿಜಯಕುಮಾರ್ ಹಾಗೂ ಪದಾಧಿಕಾರಿಗಳು ಮತ್ತು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.