ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೆನರಿಕ್ ಔಷಧ ಮಳಿಗೆ ಶೀಘ್ರ ಆರಂಭ

Mainashree
Updated On : 15 Nov 2013, 11:57 am

ಸಾಗರ: ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯದಲ್ಲಿಯೆ ಜೆನರಿಕ್ ಔಷಧ ಮಳಿಗೆ ಕಾರ್ಯಾರಂಭ ಮಾಡಲಿದೆ. ಇದರಿಂದಾಗಿ ಬಡ ರೋಗಿಗಳು ಖಾಸಗಿ ಔಷಧಿ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಔಷಧಿ ಕೊಳ್ಳುವುದು ತಪ್ಪುತ್ತದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಜೆನರಿಕ್ ಔಷಧ ಮಳಿಗೆ ತೆರೆಯಲು ಪ್ರತಿ ಆಸ್ಪತ್ರೆಗೆ ತಲಾ 25 ಲಕ್ಷ ರು. ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಹಣದಲ್ಲಿ ಆಸ್ಪತ್ರೆಯ ಒಳಗೆ ಉಚಿತವಾಗಿ ನೀಡುವ ಔಷಧಿಯನ್ನು ಹೊರತುಪಡಿಸಿ ಇತರೆ ಔಷಧಿಗಳನ್ನು ಖರೀದಿಸಲಾಗುವುದು. ಜೆನರಿಕ್ ಔಷಧ ಮಳಿಗೆಯಲ್ಲಿ ರೋಗಿಗಳಿಗೆ ಅತಿ ಕಡಿಮೆ ಬೆಲೆಯಲ್ಲಿ ಔಷಧಿ ಮಾರಾಟ ಮಾಡಲಾಗುವುದು ಎಂದರು.
ಬ್ಲಡ್ ಬ್ಯಾಂಕ್: ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ಸ್ಥಾಪಿಸಬೇಕು ಎನ್ನುವ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಎರಡೂ ಉತ್ಸುಕತೆ ತೋರಿಸಿದ್ದು, ಅಗತ್ಯ ಸೌಲಭ್ಯ ಕಲ್ಪಿಸಿದ ಮೇಲೆ ಬ್ಲಡ್‌ಬ್ಯಾಂಕ್ ಕಾರ್ಯಾರಂಭ ಮಾಡಲಿದೆ ಎಂದರು.  ವೈದ್ಯರಿಗೆ ಸಮಾನ ವೇತನ ನೀತಿ ಜಾರಿಗೆ ತರುವಂತೆ ಸಿಎಂ ಆರೋಗ್ಯ ಸಚಿವರಿಗೆ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement