ಸುದ್ದಿ ಸಂಕ್ಷೇಪ
ಬಾಲಕಿ ಕಾಣೆ
ಶಿವಮೊಗ್ಗ: ದೀಪಾ ಎಂಬ ಮಹಿಳೆ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಿಂದ ಸೆ.4ರಂದು ಕಾಣೆಯಾಗಿದ್ದಾರೆ. 17 ವರ್ಷ ವಯಸ್ಸಾಗಿದ್ದು, ನಾಲ್ಕೂವರೆ ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಕನ್ನಡ ಮಾತನಾಡುತ್ತಾಳೆ. ಕಾಣೆಯಾದಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ದೀಪಾರವರ ತಂದೆ ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈಕೆ ಎಲ್ಲಿಯಾದರೂ ಕಂಡುಬಂದಲ್ಲಿ ಆರಕ್ಷಕ ಉಪ ನಿರೀಕ್ಷಕರು, ಪೊಲೀಸ್ ಠಾಣೆ, ಆನವಟ್ಟಿ, ಸೊರಬ ತಾಲೂಕು ಇವರಿಗೆ ತಿಳಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ. ಮಾಹಿತಿಗಾಗಿ ದೂ.ಸಂ.08184 -267135ನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ
ಶಿವಮೊಗ್ಗ: ನಗರಸಭೆಯು ಚುನಾವಣಾ ಆಯೋಗದ ನಿರ್ದೇಶನದಂತೆ ಶಿವಮೊಗ್ಗ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ 2013ರ ಕುರಿತಂತೆ ಅ.30ರಂದು ಮತದಾರರ ಪಟ್ಟಿಯ ಕರಡು ಪ್ರಕಟಣೆ ಮಾಡಲಾಗಿದೆ. ನಿಗದಿತ ನಮೂನೆಗಳಲ್ಲಿ ನವೆಂಬರ್ 30ರೊಳಗೆ ಸಲ್ಲಿಸಲು ಅವಕಾಶವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತರು ತಿಳಿಸಿದ್ದಾರೆ.
ಬಿಜೆಪಿ ಬೈಕ್ ರ್ಯಾಲಿ
ಶಿವಮೊಗ್ಗ: ಬೆಂಗಳೂರಿನಲ್ಲಿ ನ.17 ರಂದು ನಡೆಯಲಿರುವ ನರೇಂದ್ರ ಮೋದಿಯವರ ಸಮಾವೇಶದ ಕುರಿತಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರ ಬಿಜೆಪಿ ಯುವ ಮೋರ್ಚಾದಿಂದ ಗುರುವಾರ ಬೈಕ್ ರ್ಯಾಲಿ ನಡೆಸಲಾಯಿತು. ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಆರಂಭವಾದ ರ್ಯಾಲಿಗೆ ಬಿಜೆಪಿ ಮುಖಂಡ ಅರುಣ್, ಜ್ಞಾನೇಶ್ವರ್ ಚಾಲನೆ ನೀಡಿದರು. ರಸ್ತೆಗಳಲ್ಲಿ ಸಂಚರಿಸಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕೋರಲಾಯಿತು.