ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಹಿಂದ ಪ್ರವಾಸಕ್ಕೆ ಪ್ರತಿಕ್ರಿಯೆ

Rashmi Kasaragodu
Updated On : 16 Nov 2013, 11:16 am


ಮಕ್ಕಳಲ್ಲಿ ಯಾವುದೇ ಜಾತಿ, ಮತ ಮತ್ತು ಧರ್ಮದ ಭೇದಭಾವ ಇರುವುದಿಲ್ಲ. ಆದರೆ, ಸರ್ಕಾರದ ಈ ಯೋಜನೆಯಿಂದ ನಮ್ಮಲ್ಲಿ ಜಾತೀಯತೆಯ ತಾರತಮ್ಮ ಹುಟ್ಟಿತ್ತದೆ.      ಟಿ ಕಿರಣ್ ಕುಮಾರ್,             ವಿದ್ಯಾರ್ಥಿ
ಈ ಯೋಜನೆಯಿಂದ ಮಕ್ಕಳು ರಾಜ್ಯದ್ಯಂತ ಪ್ರವಾಸ ಮಾಡಬಹುದು. ಕೇವಲ ಅಹಿಂದ ವಿದ್ಯಾರ್ಥಿಗಳಿಗೆ ಮಾಡಿರುವುದು ಸರಿಯಲ್ಲ. ನಮಗೂ ಈ ಯೋಜನೆ ಕೊಟ್ಟರೆ, ನಾವು ಕೂಡ ರಾಜ್ಯ ಸುತ್ತುತ್ತೇವೆ.
ಪ್ರಮೋದ್, ವಿದ್ಯಾರ್ಥಿ            
ಸರ್ಕಾರದ ಉದ್ದೇಶ ಚನ್ನಾಗಿದೆ. ಆದರೆ, ಈ ತೀಯ ಏಕವರ್ಗದ ಧೋರಣೆ ಸರಿಯಲ್ಲ. ಇದರಿಂದ ಮಕ್ಕಳಲ್ಲಿ ಜಾತಿಯತೆ ಹುಟ್ಟಿಕೊಳ್ಳುತ್ತದೆ. ಕೇವಲ ಅಲ್ಪಸಂಖ್ಯಾತರು ಮಾತ್ರ ಶಾಲೆಗೆ ಬರುವುದಿಲ್ಲ.
   ಟಿ ಶ್ರೀನಿವಾಸವರ್ಮ,  ಶಿಕ್ಷಕ



ಒಂದು ವರ್ಗದವರಿಗೆ ಈ ಯೋಜನೆ ತಂದಿರುವುದು ಸರಿಯಲ್ಲ. ಶಾಲೆಯ ಮಕ್ಕಳಲ್ಲಿ ಯಾವುದೇ ಭೇದ- ಭಾವ ಇರುವುದಿಲ್ಲ. ಈ ಯೋಜನೆ ಜಾರಿಗೆ ತರುವುದರಿಂದ ಮಕ್ಕಳಲ್ಲಿ ತಾರತಮ್ಯ ಭಾವನೆ ಬೆಳಸಿದಂತಾಗುತ್ತದೆ.
  ಟಿ ನಾಗರಾಜ್,  ಪ್ರಾಂಶುಪಾಲರು
ಈ ಯೋಜನೆ ಜಾರಿಗೆ ತರುವುದರಿಂದ ಮಕ್ಕಳಲ್ಲಿ ತಾರತಮ್ಮ ಭಾವನೆ ಹುಟ್ಟಿಹಾಕುತ್ತದೆ. ಈಗಾಗಲೇ ಶಾಲೆಯಲ್ಲಿ ಮಕ್ಕಳು ಈ ಯೋಜನೆ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಶಿಕ್ಷಕರಿಗೆ ಕೇಳುತ್ತಿದ್ದಾರೆ.
    ಟಿ ಲಲಿತ ವೈ.ಎನ್, ಶಿಕ್ಷಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement