ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಮರಾವ್ಗೆ ಉಪ್ಪೂರ ಪ್ರಶಸ್ತಿ

Rashmi Kasaragodu
Updated On : 16 Nov 2013, 11:17 am

ಸಾಗರ: ಉಡುಪಿಯ ಶ್ರೀಕೃಷ್ಣ ಮಠ, ಪರ್ಯಾಯ ಸೋದೆ ವಾದಿರಾಜ ಮಠ ಹಾಗೂ ಯಕ್ಷಗಾನ ಕಲಾವಿದರ ಕುರಿತು ರಚನಾತ್ಮಕ ಕಾಳಜಿ ತೋರಿಸುತ್ತಿರುವ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ 2013ನೇ ಸಾಲಿನ ಶ್ರೀ ವಿಶ್ವೇಶ್ವರತೀರ್ಥ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಇತ್ತೀಚೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರದಾನ ಮಾಡಲಾಯಿತು. ಸಾಗರ ಪ್ರಾಂತ್ಯದ ಬೆಳೆಯೂರು ಮಹಾಗಣಪತಿ ಯಕ್ಷಗಾನ ಮಂಡಳಿಗೆ ಶ್ರೀ ವಿಶ್ವೇಶ್ವರತೀರ್ಥ ಪ್ರಶಸ್ತಿ ಹಾಗೂ 40 ವರ್ಷಗಳಿಂದ ಭಾಗವತಿಕೆ ಮಾಡುತ್ತಿರುವ ಪುರಪ್ಪೆಮನೆಯ ಕೆ.ಜಿ. ರಾಮರಾವ್ ಇವರಿಗೆ ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ ನೀಡಿ ಶ್ರೀಗಳು ಗೌರವಿಸಿದರು.
ಪದಾಧಿಕಾರಿ ಆಯ್ಕೆ
ಭದ್ರಾವತಿ: ತಾಲೂಕು ಭೋವಿ ಜನಾಂಗದ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಎಸ್. ಕೃಷ್ಣಮೂರ್ತಿ ಪುನರಾಯ್ಕೆಯಾಗಿದ್ದಾರೆ.  ಉಪಾಧ್ಯಕ್ಷರಾಗಿ ನಾಗರಾಜು, ಎಂ.ವಿ. ಚಂದ್ರಶೇಖರ್, ಕೆ.ಬಿ. ಚಂದ್ರಪ್ಪ, ಬಾಲರಾಜು ಬಸಲಿಕಟ್ಟೆ ಮತ್ತು ಟಿ. ರಂಗನಾಥ ಬೊಮ್ಮೇನಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತಪ್ಪ ಆಯ್ಕೆಯಾಗಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement