ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆಯಿಂದ ಶಾಲೆಗೊಂದು ಸಾಹಿತ್ಯ

Mainashree
Updated On : 17 Nov 2013, 10:48 am

ಕ.ಪ್ರ.ವಾರ್ತೆ  ಶಿವಮೊಗ್ಗ   ನ.16
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ನ.18ರಿಂದ 21ರವರೆಗೆ ನಗರದ ವಿವಿಧೆಡೆ ಶಾಲೆಗೊಂದು ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನ.18ರಂದು ಬೆಳಗ್ಗೆ 10ಕ್ಕೆ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನ ಶಾಲೆ ಆವರಣದಲ್ಲಿನ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಸಿ. ಬಸವರಾಜಪ್ಪ ಉದ್ಘಾಟಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಹಾಲಾನಾಯ್ಕ, ರಾಮಕೃಷ್ಣ ವಿದ್ಯಾಸಂಸ್ಥೆಯ ಡಾ. ಡಿ.ಆರ್. ನಾಗೇಶ್, ಕಾರ್ಯದರ್ಶಿ ದಾವಣೆಬೈಲು ವೆಂಕಟರಮಣ, ತಾಲೂಕು ಕಸಾಪ ಅಧ್ಯಕ್ಷೆ ಶೀಲಾ ಸುರೇಶ್ ಪಾಲ್ಗೊಳ್ಳುವರು.
ನ.18ರಂದು ಮಧ್ಯಾಹ್ನ 2-30 ಕ್ಕೆ ನಗರದ ರಾಜೇಂದ್ರ ನಗರ ಬಡಾವಣೆಯಲ್ಲಿರುವ ಸಹ್ಯಾದ್ರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾಧಿಕಾರಿ ಹೀಮಂತರಾಜು ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಕಡಿದಾಳು ಗೊಪಾಲ, ಶೀಲಾ ಸುರೇಶ್, ಟಿ.ಡಿ.ಆರ್. ಶ್ರೀಕಂಠಯ್ಯ, ಟಿ.ಪಿ. ನಾಗರಾಜ್ ಪಾಲ್ಗೊಳ್ಳುವರು.
ತಮ್ಮಡಿಹಳ್ಳಿ: ನ.19 ರಂದು ತಮ್ಮಡಿಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಡಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸುವರು. ಶೀಲಾಸುರೇಶ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಆರ್. ಪುಷ್ಪಾ, ಕುಬೇರಪ್ಪ ಹಾಗೂ ಅದೇದಿನ ಮಧ್ಯಾಹ್ನ 2.30ಕ್ಕೆ ಮಂಡಗಟ್ಟ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಹಸೀಲ್ದಾರ್ ಎಚ್. ಕೊಟ್ರೇಶ್ ಉದ್ಘಾಟಿಸುವರು.
ನ.20 ರಂದು ನಗರದ ಬಿ. ಎಚ್. ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಚುನಾವಣಾ ವಿಭಾಗದ ತಹಸೀರ್ ಗಣಪತಿ ಕಟ್ಟಿನಕೆರೆ ಉದ್ಘಾಟಿಸುವರು. ಅತಿಥಿಗಳಾಗಿ ಜಿ.ಪಿ. ಸಂಪತ್ ಕುಮಾರ್, ಇ. ಜಯಣ್ಣ ಪಾಲ್ಗೊಳ್ಳಲ್ಲಿದ್ದು, ನ.21ರಂದು ಬೆಳಗ್ಗೆ 11ಗಂಟೆಗೆ ಬಸವೇಶ್ವರ ನಗರ ಬಡಾವಣೆಯಲ್ಲಿರುವ ಆಕ್ಸ್ ಫರ್ಢ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯವು ಕಾರ್ಯಕ್ರಮವನ್ನು ಸಹಕಾರಿ ಸಂಘಗಳ ಉಪನಿಬಂಧಕ ಸಂತೋಷ್ ಕುಮಾರ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2,30 ಕ್ಕೆ ರಾಜೇಂದ್ರ ನಗರದಲ್ಲಿರುವ ಜ್‌ಞಾನಜ್ಯೋತಿ ಪ್ರೌಢಶಾಲೆಯ ಆವರಣದಲ್ಲಿ ಸಾಹಿತಿ ಡಾ ಕೆ.ಎನ್. ಗುರುದತ್ತ ಉದ್ಘಾಟಿಸಲಿದ್ದಾರೆ.
ಮಕ್ಕಳು ತಾವು ಬರೆದ ಸ್ವರಚಿತ ಕವನ, ಕಥೆಗಳ ವಾಚನ, ಪಠ್ಯದಲ್ಲಿರುವ ಪದ್ಯವನ್ನು ಓದುವುದು, ವಿಶ್ಲೇಷಿಸುವುದು, ಪಠ್ಯದಲ್ಲಿರುವ ಗದ್ಯದ ವಿಶ್ಲೇಷಣೆ ಮಾಡುವುದು, ಹಳೆಗನ್ನಡ ಪದ್ಯಗಳ ವಾಚನ ನಡೆಸಲಾಗುವುದು. ವಿಜ್ಞಾನದ ವಿಷಯದಲ್ಲಿ ಮೂಡನಂಬಿಕೆ ಮತ್ತು ವಿಜ್ಞಾನ, ಮಾನವ ನಿರ್ಮಿತ ವಸ್ತುಗಳು, ಮಳೆನೀರು ಸಂಗ್ರಹ ಮತ್ತು ಮಹತ್ವ, ಪರಿಸರ ನಿರ್ವಹಣೆ
ನಮ್ಮ ಜವಾಬ್ದಾರಿ, ಇಂಧನದ ಮಹತ್ವ, ಸೂರ್ಯನ ಅವಸಾನ ಮತ್ತು ಆತಂಕ, ವಿಕಿರಣಗಳು ಒಂದು ವಿಶ್ಲೇಷಣೆ, ರಸಾಯನ ವಿಜ್ಞಾನದ ಕೊಡುಗೆ, ಅನುವಂಶಿಯತೆ ಮತ್ತು ಪರಿಸರ, ಶಕ್ತಿಯ ಬಿಕ್ಕಟ್ಟುಗಳು, ಇತಿಹಾಸ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು, ಕರ್ತವ್ಯ ಜವಾಬ್ದಾರಿಗಳು, ಅಕ್ಷಾಶ, ರೇಖಾಂಶ ಕುರಿತು, ಭೂಕಂಪಗಳು ಪ್ರಕೃತಿ ವಿಕೋಪ, ವಿಜಯನಗರ ವಾಸ್ತುಶಿಲ್ಪ, ನದಿಗಳು ಯುದ್ಧಗಳು-ವಿಶ್ವ ಮಹಾಯುದ್ಧ ಸೇರಿದಂತೆ ಹಲವು ವಿಷಯಗಳ ಕುರಿತು ಕೆಲವನ್ನು ಆಯ್ದು ವಿದ್ಯಾರ್ಥಿಗಳು ಮಾತನಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement