ಮಳೆ: ಮುಂಜಾಗ್ರತೆಗೆ ಸಲಹೆ
ಶಿವಮೊಗ್ಗ: ಜಿಲ್ಲೆಯಲ್ಲಿ ಮುಂದಿನ 3 ದಿನಗಳ ಕಾಲ ತುಂತುರು ಮಳೆಯಾಗುವ ಸಾಧ್ಯತೆ ಇದ್ದು, ರೈತರು ಮುಂಜಾಗ್ರತೆ ವಹಿಸುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.
ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ ಮಳೆ ಬರುವ ಸೂಚನೆ ನೀಡಿದ್ದು, ಬತ್ತ ಕಟಾವು ಕಾರ್ಯವನ್ನು ಈ 3 ದಿನ ಮುಂಜಾಗ್ರತಾ ಕ್ರಮ ಕೈಗೊಂಡು ನಿರ್ವಹಿಸಿ. ಅಥವಾ ವಾತಾವರಣ ತಿಳಿಯಾದ ನಂತರ ಮುಂದುವರಿಸಿ.
ಈಗಾಗಲೇ ಬತ್ತ ಕಟಾವು ಮಾಡಿ, ಜಮೀನಿನಲ್ಲಿ ಒಣಗಲು ಬಿಟ್ಟಿರುವ ರೈತರು ದಾಸ್ತಾನನ್ನು ಸುರಕ್ಷಿತವಾಗಿ ಕಾಪಾಡಲು ಕ್ರಮ ಕೈಗೊಳ್ಳಿ. ಮಳೆ, ಹವಾಮಾನ ಮುನ್ಸೂಚನೆಯ ಬಗ್ಗೆ ಮಾಹಿತಿ ಪಡೆಯಲು ಹೆಲ್ಪ್ ಡೆಸ್ ವರುಣ ಮಿತ್ರ (ದೂರವಾಣಿ- 92433 45433 ಅಥವಾ 080 22745232) ಸಂಪರ್ಕಿಸಿ. ಹತ್ತಿರದ ಕೃಷಿ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರವನ್ನೂ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಕೆ. ಮಧುಸೂದನ್ ಹೇಳಿದ್ದಾರೆ.