ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಧಾರ್ಮಿಕ ಕಾರ್ಯಕ್ರಮ

Rashmi Kasaragodu
Updated On : 19 Nov 2013, 11:05 am

ಶಿವಮೊಗ್ಗ: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನ.19ರಿಂದ 21ರವರೆಗೆ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ತಿಕ ದಿಪೋತ್ಸವ, ಲಕ್ಷ ದೂರ್ವಾರ್ಚನೆ, ಕೋಟಿ ಕುಂಕುಮಾರ್ಚನೆ ಹಾಗೂ ನೇತ್ರ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. 19ರಂದು ಸಂಜೆ 5 ಗಂಟೆಗೆ ರಾಮಚಂದ್ರಪುರ ಮಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಪಾದಪೂಜೆ, 20ರಂದು ಬೆಳಿಗ್ಗೆ 9 ಗಂಟೆಗೆ ಗುರುಭಿಕ್ಷಾಂಗ ಪಾದುಕಾ ಪೂಜೆ ಹಾಗೂ ಗೋಪೂಜೆ, ಬೆಳಗ್ಗೆ 10 ಗಂಟೆಗೆ ಮೈಸೂರಿನ ಡಾ ಡಿ.ಎಸ್. ವಿದ್ಯಾಶಂಕರ್ ಮತ್ತು ತಂಡದವರಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ 21ರಂದು ಬೆಳಗ್ಗೆ 9ಗಂಟೆಗೆ ಶ್ರೀಮಾತೆ ಸನ್ನಿಧಿಯಲ್ಲಿ ಕೋಟಿ ಕುಂಕುಮಾರ್ಚನೆ ಹಾಗೂ ಲಕ್ಷ ದೀಪೋತ್ಸವ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ಶ್ರೀಕ್ಷೇತ್ರದ ಧರ್ಮಕರ್ತರಾದ ಡಾ ಜಿ. ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಇಂದಿನಿಂದ ಸಂಗೀತಸುಧಾ
ಶಿವಮೊಗ್ಗ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ 2 ದಿನಗಳ ಸಂಗೀತಸುಧಾ ಕಾರ್ಯಕ್ರಮವನ್ನು ನ.20 ಹಾಗೂ 21ರಂದು ಪ್ರತಿದಿನ ಸಂಜೆ 6.30ಕ್ಕೆ ಆಯೋಜಿಸಿದೆ. ಮೊದಲ ದಿನ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ, ಎರಡನೇ ದಿನ ವಿದ್ಯಾಭೂಷಣರು ಕಾರ್ಯಕ್ರಮ ನಡೆಸಿಕೊಡುವರು. ಮೊದಲ ದಿನ ಸಂಜೆ ವಿಪ ಸದಸ್ಯೆ ಡಾ. ಎಸ್.ಆರ್. ಲೀಲಾ ಉದ್ಘಾಟಿಸಲಿದ್ದು, ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಕಂಚಿ ಕಾಮಗೋಟಿ ಪೀಠದ ಆಸ್ಥಾನ ವಿದ್ವಾಂಸರಾಗಿ ನಿಯುಕ್ತಿಗೊಂಡ ವಿ. ಶೃಂಗೇರಿ ಎಚ್.ಎಸ್. ನಾಗರಾಜ್ ಅವರನ್ನು ಸನ್ಮಾನಿಸಲಾಗುವುದು ಎರಡನೇ ದಿನ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಎಸ್.ಎಲ್. ಶ್ರೀರಂಗರಾಜು ಅವರನ್ನು ಸನ್ಮಾನಿಸಲಾಗುವುದು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಶ್ರೀಗಂಧ ಸಂಚಾಲಕ ಬಿ.ಆರ್. ಮಧುಸೂದನ್ ಕಾರ್ಯಕ್ರಮದ ವಿವರ ನೀಡಿದರು. ಕಾರ್ಯಕ್ರಮದ ಪಾಸ್ಗಳು, ಗೋಪಿ ವೃತ್ತದಲ್ಲಿರುವ ಶ್ರೀನಿಧಿ  ಟೆಕ್ಸ್ಟೈಲ್, ನೆಹರೂ ರಸ್ತೆಯ ದುರ್ಗಾ ಮಾರ್ಕೆಟಿಂಗ್,  ಸಿ.ಎಲ್. ರಾಮಣ್ಣ ರಸ್ತೆಯ ವಿಶ್ವಂಬರ ಏಜೆನ್ಸೀಸ್, ಕೆ.ಆರ್. ಪುರಂನ ರಾಯಲ್ ಪ್ರಿಂಟರ್ಸ್, ಓಲ್ಡ್ಬಾರ್ ಲೈನ್ ರಸ್ತೆಯ ಶರ್ಮಾ ವೀಡಿಯೋ, ವಿನೋಬನಗರದ ವಿಪ್ರ ಟ್ರಸ್ಟ್ ನಲ್ಲಿ ಸಿಗುತ್ತವೆ. ಹೆಚ್ಚಿನ ಮಾಹಿತಿಗೆ 94481 27254, 98860 00850 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement