'ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಅವಶ್ಯ'
ಕ.ಪ್ರ.ವಾತೆ, ಶಿರಾಳಕೊಪ್ಪ, ನ.18
ಮುಂಬರುವ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣ ಅತಿ ಅವಶ್ಯಕ ಎಂಬುದನ್ನು ಮನಗಂಡು ಸರ್ಕಾರ ಹಲವಾರು ಶಾಲೆಗಳಿಗೆ ಕಂಪ್ಯೂಟರ್ಗಳನ್ನು ಪೂರೈಸಿ ಶಾಲೆಯಲ್ಲಿ ಎಲ್ಲಾ ಮಕ್ಕಳು ಶಿಕ್ಷಣ ಪಡೆಯುವಂತೆ ಮಾಡಿದೆ. ಸರ್ಕಾರದ ಈ ಕಾರ್ಯ ಶ್ಲಾಘನೀಯ ಎಂದು ಸರ್ಕಾರಿ ಫ್ರೌಡಶಾಲೆಯ ಶಾಲಾ ಸಮಿತಿ ಉಪಾಧ್ಯಕ್ಷ ರವಿ ಶಾನಭೋಗ ತಿಳಿಸಿದರು.
ಸೋಮವಾರ ಶಿರಾಳಕೊಪ್ಪದ ಸಪಪೂ ಕಾಲೇಜಿನ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರ್ಜಾಲ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಷ್ಟೇ ಕೆಟ್ಟದ್ದು; ಪಪಂ ಸದಸ್ಯ ಮಂಜು ನಾಯಕ್ ಮಾತನಾಡಿ, ಅಂತರ್ಜಾಲ ಕಾರ್ಯಕ್ರಮ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದು. ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆಯದಕ್ಕಾಗಿ ಮಾತ್ರ ಇದನ್ನು ಉಪಯೋಗಿಸಬೇಕು ಎಂದು ತಿಳಿಸಿದರು.
ಡಿಪ್ಲೊಮೋ ಕಾಲೇಜು ಉಪನ್ಯಾಸಕ ಉಮೇಶ ಮಾತನಾಡಿ, ಸರ್ಕಾರ ಮಕ್ಕಳಿಗೆ ಜಾಗತೀಕರಣದ ತಿಳಿವಳಿಕೆ ಕೊಟ್ಟು ಬಡಮಕ್ಕಳು ಇಂದು ಪ್ರಪಂಚದ ಎಲ್ಲಾ ಸಂಗತಿಗಳನ್ನು ತಿಳಿದುಕೊಳ್ಳುವಂತೆ ಮಾಡಿದೆ.
ಹಿಂದಿನ ಕಾಲದಲ್ಲಿ ಓದು ಬರಹ ಬಾರದವರು ದಡ್ಡರು ಎಂದು ಕರೆಯುತ್ತಿದ್ದರು. ಆದರೆ ಇಂದು ಕಂಪ್ಯೂಟರ್ ಜ್ಞಾನ ಇಲ್ಲದವರನ್ನು ದಡ್ಡರು ಎಂದು ಕರೆಯುತ್ತಾರೆ ಎಂದರು.
ಶಿಕ್ಷಕಿ ದೀಪಿಕಾ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ಎನ್. ಸೋಮಶೇಖರ್ ಮಾತನಾಡಿ, ಸರ್ಕಾರ ಗ್ರಾಮಾಂತರ ಪ್ರದೇಶದ ಎಲ್ಲಾ ಶಾಲಾ ಮಕ್ಕಳು ಕಂಪ್ಯೂಟರ್ ಕಲಿಯಲಿ ಎಂದು 3 ದಿನಗಳ ಕಾಲ ವಿವಿಧ ಶಾಲಾ ಮಕ್ಕಳಿಗೆ ಈ ಶಿಕ್ಷಣ ಕೊಡಲಾಗುತ್ತಿದೆ ಎಂದರು.
ಶಾಲೆಯ ವಿಜ್ಞಾನ ಶಿಕ್ಷಕ ಹನುಮಂತಪ್ಪ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಮಂಗಳಾ ಹೆಗಡೆ ವಂದಿಸಿದರು. ಶಿಕ್ಷಕಿ ಎಂ.ಬಿ. ಶಾಕುಮತಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಲವರು ಇದ್ದರು.