ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ತುಷಾರ ಗೌರಿಗೆ ಸನ್ಮಾನ

Mainashree
Updated On : 20 Nov 2013, 11:07 am

ಶಿವಮೊಗ್ಗ: ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಫ್ರೆಂಡ್ಸ್ ಸೆಂಟರ್ ಮತ್ತು ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಆಶ್ರಯದಲ್ಲಿ ಹರಿಕಥಾ ಕೀರ್ತನೆಯಲ್ಲಿ ಸಾಧನೆಗೈದ ಬಾಲ ಕಲಾವಿದೆ ತುಷಾರ ಗೌರಿಯವರನ್ನು ಸನ್ಮಾನಿಸಿ -ಕೀರ್ತನಾ ವಲ್ಲರಿ- ಎಂಬ ಬಿರುದು ನೀಡಿ, ಗೌರವಿಸಲಾಯಿತು. ನಂತರ ತುಷಾರ ಗೌರಿ ಹನುಮದ್ವಿಲಾಸ ಎಂಬ ಹರಿಕಥಾ ಕೀರ್ತನೆ ನಡೆಸಿಕೊಟ್ಟರು.
ಫ್ರೆಂಡ್ಸ್ ಸೆಂಟರ್ ಸದಸ್ಯ ಜಿ. ವಿಜಯಕುಮಾರ್ ಮತ್ತು ರವಿಶಂಕರ್ ತಮ್ಮ ನೇಪಾಳ ಪ್ರವಾಸ ಹಾಗೂ ದೇಸಾಯಿಕುಂಡ್ ಚಾರಣದ ಅನುಭವವನ್ನು ಛಾಯಾ ಚಿತ್ರಗಳೊಂದಿಗೆ ಎಲ್.ಸಿ.ಡಿ ಮೂಲಕ ವಿವರಿಸಿದರು. ಫ್ರೆಂಡ್ಸ್ ಸೆಂಟರ್ ಸದಸ್ಯರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಸೆಂಟರ್ ಅಧ್ಯಕ್ಷ ಅಶ್ವಥ್ ನಾರಾಯಣ ಶೆಟ್ಟಿ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement