ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ನೇಕ್ ಮುಸ್ತಾಕ್ ಹಾವಿಗೆ ಬಲಿ

Lingaraj Badiger
Updated On : 21 Nov 2013, 10:42 am

ಶಿರಾಳಕೊಪ್ಪ:  ಶಿರಾಳಕೊಪ್ಪ ಭಾಗದಲ್ಲಿ, ನೂರಾರು ಜನರನ್ನು ಹಾವಿನಿಂದ ರಕ್ಷಿಸಿದ್ದ ಮುಸ್ತಕ್(45) ಮಂಗಳವಾರ ನಾಗರಹಾವು ಕಚ್ಚಿ ವೃತಪಟ್ಟಿದ್ದಾರೆ.
ಕೂಲಿ ಮಾಡಿಕೊಂಡಿದ್ದ ಮುಸ್ತಾಕ್ ಬಳ್ಳಿಗಾವಿ ಬಳಿ ಬಿಳಕಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಕೆಲಸಕ್ಕೆ ತೆರಳಿದಾಗ ಹಾವು ಕಚ್ಚಿದೆ. ತಕ್ಷಣ ಅವರು ತಮಗೆ ಗೊತ್ತಿದ್ದಂತಹ ಎಲ್ಲ ಚಿಕಿತ್ಸೆ ಮಾಡಿಕೊಂಡರು ಫಲಿಸದಿದ್ದಾಗ ಶಿವಮೊಗ್ಗ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಮಾರ್ಗ ಮಧ್ಯೆ ನಿಧನ ಹೊಂದಿದ್ದಾರೆ.   
ಸಾವಿರಾರು ಹಾವು ಹಿಡಿದ ಸಾಧನೆ: ಶಿರಾಳಕೊಪ್ಪ ಭಾಗದಲ್ಲಿ ನಾಗರ ಹಾವು ಕಂಡಾಕ್ಷಣ ಬಳ್ಳಿಗಾವಿ ಮುಸ್ತಾಕ್‌ಗೆ ಪೋನ್ ಮಾಡಿದ ತಕ್ಷಣ ಕೆಲವೇ ಕ್ಷಣದಲ್ಲಿ ಬಂದು ಹಾವನ್ನು ಹಿಡಿದು ಅದನ್ನು ಹಿಂಸಿಸದೇ ಕಾಡಿಗೆ ಬಿಟ್ಟು ಬರುತ್ತಿದ್ದರು. ನೂರಾರು ಹಾವುಗಳನ್ನು ಹಿಡಿದು ಜನರ ಪ್ರಾಣ ಕಾಪಾಡಿದ್ದ  ಮುಸ್ತಾಕ್ ಹಾವಿಗೇ ಬಲಿಯಾದದ್ದು ವಿಪರ್ಯಾಸ.
ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಮೃತನ ಅಂತ್ಯಸಂಸ್ಕಾರ ಬುಧವಾರ ಬಳ್ಳಿಗಾವಿಯಲ್ಲಿ ನಡೆಯಿತು.

ಗಾಂಜಾ ಸಾಗಣೆ: ಇಬ್ಬರ ಬಂಧನ
ಶಿಕಾರಿಪುರ: ಅಕ್ರಮವಾಗಿ ಗಾಂಜಾ ಖರೀದಿಸಿ ಸಾಗಿಸುತ್ತಿದ್ದ ಯತ್ನಿಸುತ್ತಿದ್ದ ಆರೋಪಿಗಳನ್ನು ಅನುಮಾನಾಸ್ಪದವಾಗಿ ಬೆನ್ನಟ್ಟಿದ ಶಿಕಾರಿಪುರ ಪೊಲೀಸರು ಆರೋಪಿಗಳಿಂದ ಸಾವಿರಾರು ರೂ.ಬೆಲೆ ಗಾಂಜಾ ಸಹಿತ ಕೃತ್ಯಕ್ಕೆ ಬಳಸಲು ಉಪಯೋಗಿಸುತ್ತಿದ್ದ ವಾಹನ ವಶಪಡಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಚುಂಚಿನಕೊಪ್ಪ ಮುಡುಬ ಸಿದ್ದಾಪುರದ ಕಡೆಯಿಂದ ಶಿಕಾರಿಪುರ ಪಟ್ಟಣಕ್ಕೆ ಬರುತ್ತಿದ್ದ ಸುಮೋ ಬಗ್ಗೆ ಅನುಮಾನಗೊಂಡ ಪೋಲಿಸರು ಸಿಪಿಐ ಮಾದಪ್ಪ ನೇತೃತ್ವದಲ್ಲಿ ನಿಲ್ಲಿಸಿದಾಗ ಗೋವಾ ಮೂಲದ ನವೀನ್ ಫರ್ನಾಂಡೀಸ್ ಹಾಗೂ ಚಾಲಕ ಮಹಮ್ಮದ್ ರಫೀಕ್ ಇರಿಸಿಕೊಂಡಿದ್ದ 2 ಸಿಮೆಂಟ್ ಚೀಲ ಗಾಂಜಾ ಸೊಪ್ಪನ್ನು (ಅಂದಾಜು ರು. 40,000) ವಾಹನ ಸಹಿತ ವಶಪಡಿಸಿಕೊಂಡಿದ್ದಾರೆ.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement