ಪಡಿತರ ಬಿಡುಗಡೆ
ಶಿವಮೊಗ್ಗ: ನವೆಂಬರ್ ಮಾಹೆಗೆ ಭದ್ರಾವತಿ ವ್ಯಾಪ್ತಿಯ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ 1 ನಂತೆ 29 ಕೆಜಿ ಅಕ್ಕಿ ಮತ್ತು 1 ನಂತೆ 6 ಕೆಜಿ ಗೋದಿ ವಿತರಿಸಲಾಗುವುದು. ಬಿಪಿಎಲ್ ಕಾರ್ಡುದಾರರಿಗೆ 1 ದರದಲ್ಲಿ ಒಂದು ಯೂನಿಟ್ಗೆ 9 ಕೆಜಿ ಅಕ್ಕಿ, 1 ದರದಲ್ಲಿ 1 ಕೆಜಿ ಗೋದಿ, 2 ಯೂನಿಟ್ಗೆ 18 ಕೆಜಿ ಅಕ್ಕಿ, 1 ದರದಲ್ಲಿ 2 ಕೆಜಿ ಗೋದಿ, 3 ಯೂನಿಟ್ ಮತ್ತು ಮೇಲ್ಪಟ್ಟು ಸದಸ್ಯರನ್ನು ಹೊಂದಿದವರಿಗೆ 27 ಕೆಜಿ ಅಕ್ಕಿ, 1 ದರದಲ್ಲಿ 3 ಕೆಜಿ ಗೋದಿ, ಅಂತ್ಯೋದಯ ಮತ್ತು ಬಿಪಿಎಲ್ ಅನಿಲರಹಿತ 1ರಿಂದ 2 ಸದಸ್ಯ ಪಡಿತರ ಚೀಟಿದಾರರಿಗೆ 16.50 ನಂತೆ 3 ಲೀ., ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರರಿಗೆ 13.50ರಂತೆ 1 ಕೆಜಿ ಸಕ್ಕರೆ ವಿತರಿಸಲಾಗುವುದು. ಎಪಿಎಲ್ ಪಡಿತರದಾರರಿಗೆ ಸಕ್ಕರೆ ಹಂಚಿಕೆ ಇರುವುದಿಲ್ಲ.