ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ಗೆ ಪದಾದಿಕಾರಿ ಆಯ್ಕೆ
ಶಿವಮೊಗ್ಗ: ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ ಶಾಖೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಕಾರ್ಯಾಧ್ಯಕ್ಷರಾಗಿ ಮನಮೋಹನ್ ಕೆ.ಪವಾರ್, ಡಿ.ಜಿ. ಮಂಜುನಾಥ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರೋಟರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಪ್ರಶಾಂತ್, ಪಿ.ಎನ್. ದಯಾನಂದ್, ಕಾರ್ಯದರ್ಶಿಯಾಗಿ ಎನ್. ನವೀನ್ ಪಂಡಿತ್, ಸಹಕಾರ್ಯದರ್ಶಿ- ಬಾಲಚಂದ್ರ, ಜಯಚಂದ್ರ ಆಯ್ಕೆಯಾಗಿದ್ದಾರೆ.
ಖಜಾಂಚಿ- ವಿ. ಉಮೇಶ್ ಅಕ್ಕಸಾಲಿ, ಸಂಘಟನಾ ಕಾರ್ಯದರ್ಶಿ- ಹರೀಶ್ ಪಂಡಿತ್, ವಕ್ತಾರ- ಮಹೇಶ್, ನಿರ್ದೇಶಕರಾಗಿ- ರಾಘವೇಂದ್ರ ಕೆ., ಬದರೀನಾಥ್, ಸುನೀಲ, ಶರತ್ ಬೆಳ್ಳುಳ್ಳಿ, ನವೀನ್ ಆಯ್ಕೆಯಾದರು.
ಯೋಗ- ಆರೋಗ್ಯ- ಪ್ರಶಿಕ್ಷಣ ಕಾರ್ಯಕ್ರಮ
ಶಿವಮೊಗ್ಗ: ಜಿಪಂ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ನ. 25ರಿಂದ 30ರವರೆಗೆ ತೀರ್ಥಹಳ್ಳಿ ತಾಲೂಕು ಕುಪ್ಪಳ್ಳಿಯ ಹೇಮಾಂಗಣದಲ್ಲಿ ಭದ್ರಾವತಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಯೋಗ- ಆರೋಗ್ಯ- ಪ್ರಶಿಕ್ಷಣ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ನ. 25ರಂದು ಬೆಳಗ್ಗೆ 10 ಗಂಟೆಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸುವರು. ದೇವಂಗಿ ಗ್ರಾಪಂ ಅಧ್ಯಕ್ಷೆ ಶಾರದಾ ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸುವರು.