ಆಯನೂರಿನಲ್ಲಿ ಕನ್ನಡ ಹಬ್ಬದ ಸಡಗರ
ಆಯನೂರು: ಆಯನೂರಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಕರವೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಸಂಘಟನೆ ಹೋಬಳಿ ಘಟಕದ ಅಧ್ಯಕ್ಷ ಅ.ಹಾ. ಲಿಂಗರಾಜು ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವವನ್ನು ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗಾಗಿ ವಿಶೇಷ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಊರಿನವರೆಲ್ಲಾ ಕೂಡಿಕೊಂಡು ಹಬ್ಬವನ್ನು ನಡೆಸುತ್ತಿರುವುದಾಗಿ ಅವರು ವಿವರಿಸಿದರು.
ಸ್ಪರ್ಧೆ ಕುರಿತು ವಿವರಣೆ ನೀಡಿರುವ ಸಂಘಟನೆ ಉಪಾಧ್ಯಕ್ಷ ಎ.ಟಿ. ಕೃಷ್ಣಮೂರ್ತಿ, 24ರಂದು ಬೆಳಗ್ಗೆ ಇಲ್ಲಿನ ಕೋಹಳ್ಳಿಯ ಸರ್ಕಾರಿ ಹಿರಿಯ ಹೆಣ್ಣುಮಕ್ಕಳ ಶಾಲೆಯಲ್ಲಿ ಸ್ಪರ್ಧೆ ನಡೆಯಲಿವೆ. ಸಾರ್ವಜನಿಕರಿಗಾಗಿ ಹಗ್ಗಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆಸಲಾಗುತ್ತಿದೆ. ಸ್ಪರ್ಧಾಕಾಂಕ್ಷಿಗಳು ಒಂದು ದಿನ ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕು ಎಂದವರು ಹೇಳಿದ್ದಾರೆ.
ಚಿತ್ರಕಲಾ ಸ್ಪರ್ಧೆ: 1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ, ಕನ್ನಡದ ಉಗಮ ಮತ್ತು ಬೆಳವಣಿಗೆ ವಿಷಯವಾಗಿ ಪ್ರಬಂಧ ಸ್ಪರ್ಧೆ- 8ರಿಂದ 10ನೇ ತರಗತಿ ಹಾಗೂ ಪಿಯುಸಿ- ಪದವಿ ವಿದ್ಯಾರ್ಥಿಗಳಿಗೆ, ಕನ್ನಡ ಕಲಿತರೆ ಭವಿಷ್ಯವಿದೆ ವಿಷಯವಾಗಿ 8, 9 ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಚರ್ಚಾ ಸ್ಪರ್ಧೆ ನಡೆಯಲಿದೆ.
ವಿವರಗಳಿಗೆ ಎಸ್.ವಿಶ್ವನಾಥ್ ಮೊ. 98863 80575 ಇವರನ್ನು ಸಂಪರ್ಕಿಸಬಹುದು.
ಕನ್ನಡ ಹಬ್ಬದ ಸಭಾ ಕಾರ್ಯಕ್ರಮ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸುವರು. ಕರವೇ ಹೋಬಳಿ ಘಟಕದ ಅಧ್ಯಕ್ಷ ಅ.ಹಾ. ಲಿಂಗರಾಜು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ಅಭಯ ಪ್ರಕಾಶ್ ಸೋಮನಾಳ್ ಬಹುಮಾನ ವಿತರಿಸುವರು.
ಕರವೇ ಜಿಲ್ಲಾಧ್ಯಕ್ಷ ಮಂಜುನಾಥ್ ಎಸ್.ಕೋಟ್ಯಾನ್, ಗ್ರಾಪಂ ಅಧ್ಯಕ್ಷೆ ಭಾಗ್ಯ ನರಸಿಂಹಪ್ಪ,
ನ್ಯಾಯವಾದಿ ಟಿ. ಅನಿಲ್ ಕುಮಾರ್ ಉಪಸ್ಥಿತರಿರುವರು. ಭದ್ರಾವತಿ ಸರ್ಎಂ.ವಿ. ಕಾಲೇಜು ಇತಿಹಾಸ ವಿಭಾಗದ ಅಧ್ಯಾಪಕ ಡಾ.ಟಿ. ಮಂಜುನಾಥ್ ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಎಂದು ಸಂಘಟನೆ ಪದಾಧಿಕಾರಿಗಳಾದ ಎಚ್.ಸಿ. ಶಂಕರ್, ಸಿ.ಎಂ. ನಾರಾಯಣಪ್ಪ, ವಿಶ್ವನಾಥ, ಎಸ್. ರಾಘವೇಂದ್ರ ಕೋರಿದ್ದಾರೆ.