ನಾಳೆ ರುದ್ರ ಪಾರಾಯಣ
ಶಿವಮೊಗ್ಗ: ಬ್ರಾಹ್ಮಣ ಸೇವಾ ಸಂಘವು ನವೆಂಬರ್ 24ರಂದು ಗಾಯತ್ರಿ ದೇವಸ್ಥಾನದಲ್ಲಿ 7ನೇ ವರ್ಷದ ಕಾರ್ತಿಕ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 8ರಿಂದ ರುದ್ರ ಪಾರಾಯಣ ಹಾಗೂ ರುದ್ರ ಹೋಮ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷ ಎಚ್. ರವಿಶಂಕರ್, ಕಾರ್ಯದರ್ಶಿ ಎಚ್.ಡಿ. ಚಂದ್ರಶೇಖರ್ ಕೋರಿದ್ದಾರೆ.
25ರಂದು ಉಚಿತ ತಪಾಸಣಾ ಶಿಬಿರ
ಶಿವಮೊಗ್ಗ: ನಗರದ ಪಾರ್ಕ್ ಬಡಾವಣೆಯಲ್ಲಿರುವ ವಾತ್ಸಲ್ಯ ಆಸ್ಪತ್ರೆಯಲ್ಲಿ ನವೆಂಬರ್ 25ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಶಸ್ತ್ರ ಚಿಕಿತ್ಸೆ ತೊಂದರೆಗಳ ನಿವಾರಣೆಗಾಗಿ ಉಚಿತರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಹರ್ನಿಯಾ, ಸ್ತನದಲ್ಲಿ ಗಡ್ಡೆ, ಬಾವು, ಪೈಲ್ಸ್, ಫಿಶರ್ಸ್, ಪಿಸ್ತೂಲಾ, ಅನ್ನನಾಳ ಸಮಸ್ಯೆ, ಪಿತ್ತಕೋಶದ ಕಲ್ಲುಗಳು, ಅಪೆಂಡಿಕ್ಸ್, ಹೊಟ್ಟೆ ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆ, ಲಿವರ್ ಮತ್ತು ಫ್ಯಾನಕ್ರಿಯಾನ್, ಕರುಳು ಮತ್ತು ಜಠರದ ಸಮಸ್ಯೆ ಇರುವವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಮಾಹಿತಿಗೆ ದೂರವಾಣಿ- 08182 408100.
ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಶಿವಮೊಗ್ಗ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ 5 ವರ್ಷಗಳಿಗೆ ಕಡಿಮೆ ಇಲ್ಲದಂತೆ ಆದರ್ಶ ಸೇವೆ ಸಲ್ಲಿಸಿರುವ ಸ್ವಯಂಸೇವಾ ಸಂಸ್ಥೆಗಳಿಗೆ ಹಾಗೂ ಮಹಿಳಾ ಅಭಿವೃದ್ಧಿ, ಕಲೆ, ಶಿಕ್ಷಣ ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉದ್ದೇಶಿಸಿದೆ. ಹಾಗೆಯೇ ಅಪತ್ಕಾಲದಲ್ಲಿ ಸಮಯಪ್ರಜ್ಞೆಯಿಂದ ಧೈರ್ಯ- ಸಾಹಸ ತೋರಿದ ಮಹಿಳೆಗೆ ವೀರ ಮಹಿಳಾ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು, ಅರ್ಹ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೀರ ಮಹಿಳೆ ಪ್ರಶಸ್ತಿಗೆ ಆಯ್ಕೆಯಾದ ಓರ್ವ ಮಹಿಳೆಗೆ 10 ಸಾವಿರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 18ರಿಂದ 45 ವರ್ಷದ ವಯೋವುತಿಯೊಳಗಿನ ಮಹಿಳೆಯಾಗಿದ್ದು, ತಾವು ಮಾಡಿದ ಸಾಧನೆಯು ಸಾರ್ವಜನಿಕರ ಗಮನಕ್ಕೆ ಬಂದಿರಬೇಕು. ಈ ಸಾಧನೆಯು ಕಳೆದ ವರ್ಷದ ಜನವರಿಯಿಂದ ಡಿಸೆಂಬರ್ ಅಂತ್ಯದೊಳಗೆ ಇರಬೇಕು. ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಂದ ಪಡೆದು, ಭರ್ತಿಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 5ರೊಳಗಾಗಿ ಸಲ್ಲಿಸಬೇಕು. ವಿವರಗಳಿಗಾಗಿ ದೂ. 08182 249034 ಸಂಪರ್ಕಿಸಬಹುದು.
ಪ್ರೊ.ಕೆ. ಸಚ್ಚಿದಾನಂದನ್ಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ
ಬೆಂಗಳೂರು: ಕುಪ್ಪಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುವ 'ಕುವೆಂಪು ರಾಷ್ಟ್ರೀಯ ಪುರಸ್ಕಾರ'ಕ್ಕೆ ಮಲೆಯಾಳಂನ ಪ್ರೊ.ಕೆ. ಸಚ್ಚಿದಾನಂದನ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಮೊತ್ತವು 5ಲಕ್ಷ ಒಳಗೊಂಡಿದ್ದು, ಕುವೆಂಪು ಜನ್ಮದಿನವಾದ ಡಿ.29ರಂದು ಕುಪ್ಪಳಿಯಲ್ಲೇ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂ.ಪ.ನಾಗರಾಜಯ್ಯ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ರಾಷ್ಟ್ರೀಯ ಪುರಸ್ಕಾರವನ್ನು ಇದೇ ವರ್ಷ ಪ್ರಾರಂಭಿಸಿದ್ದು, ವ್ಯಕ್ತಿ ಆಯ್ಕೆಗೆ ಪ್ರೊ. ಚಂದ್ರಶೇಖ ಕಂಬಾರರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಾಹಿತಿ ಪ್ರೊ.ಬಿ.ಎ. ವಿವೇಕ ರೈ ಮತ್ತು ಡಾ. ಪುರುಷೋತ್ತಮ ಬಿಳಿ ಮಲೆ ಅವರು ಸದಸ್ಯರಾಗಿದ್ದರು.
ಇವರು ಸಚ್ಚಿದಾನಂದನ್ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಿದ್ದು, ಕುಪ್ಪಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಸಚಿವ ಎಂ. ಚಂದ್ರಶೇಖರ್ ಅವರ ಮಗ ನರೇಂದ್ರ 60 ಲಕ್ಷ ಹಣವನ್ನು ದತ್ತಿಯಾಗಿ ಇಟ್ಟಿದ್ದರು. ಇದರಿಂದ ಬಂದ ಬಡ್ಡಿದರದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ದಿನ ಕುವೆಂಪು ಅವರ “ÁÛÈÚáÛ¾Úßy ¥ÚËÚ%«ÚM’ ಅನ್ನು ಗಮಕಿಗೆ ಅಳವಡಿಸಿ ರೂಪಿಸಿರುವ ಡಿವಿಡಿಗಳ ಬಿಡುಗಡೆ ಇದೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ, ಡಾ. ಪುರುಷೋತ್ತಮ ಬಿಳಿ ಮಲೆ ಪಾಲ್ಗೊಂಡಿದ್ದರು.