ಭಗವದ್ಗೀತಾ ಪುನಶ್ಚೇತನ ಕಾರ್ಯಕ್ರಮ
ಶಿವಮೊಗ್ಗ: ಭಗವದ್ಗೀತಾ ಅಭಿಯಾನ ಕರ್ನಾಟಕ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಮತ್ತು ಶಿವಮೊಗ್ಗ ಶಾಖೆ ಸಂಯುಕ್ತ ಆಶ್ರಯದಲ್ಲಿ ನ. 25ರ ಸೋಮವಾರ ಬೆಳಗ್ಗೆ 11 ಗಂಟೆಗೆ ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಹೋಟೆಲ್ ಮಥುರಾ ಪ್ಯಾರಡೈಸ್ನಲ್ಲಿ ಭಗವದ್ಗೀತಾ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಶ್ರೀ ಮಾರ್ಗದರ್ಶನ ಮಾಡಲಿದ್ದಾರೆ. ಶಿವಮೊಗ್ಗ ನಗರದ ಹೋಟೆಲ್ ಉದ್ಯಮದ ಮಾಲೀಕರು ಹಾಗೂ ಅವರ ಪರಿವಾರದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಚಾಲಕ ಲಕ್ಷ್ಮೀನಾರಾಯಣ ಜೋಷಿ ಕೋರಿದ್ದಾರೆ. ಮಾಹಿತಿಗೆ ಮೊ. 9449897126.
ವಿದ್ಯಾರ್ಥಿಗಳಿಗೆ ಅಭಿನಂದನೆ
ಶಿವಮೊಗ್ಗ: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಆದಿಚುಂಚನಗಿರಿ ಕಾಲೇಜಿನ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಚಿತ್ರಕಲೆಯಲ್ಲಿ ಕೌಶಿಕ್(ಪ್ರಥಮ), ಕನ್ನಡ ಪ್ರಬಂಧದಲ್ಲಿ ಸೂರಜ್ ಭಟ್(ಪ್ರಥಮ),ಕನ್ನಡ ವಿಜ್ಞಾನ ಚರ್ಚಾ ಸ್ಪರ್ಧೆಯಲ್ಲಿ ಎ. ಜ್ಞಾನಶ್ರೀ(ದ್ವಿತೀಯ),ಇಂಗ್ಲಿಷ್ ಪ್ರಬಂಧ, ಚರ್ಚಾ ಸ್ಪರ್ಧೆಯಲ್ಲಿ ಸ್ವಾತಿ(ದ್ವಿತೀಯ), ರಸಪ್ರಶ್ನೆಯಲ್ಲಿ ಸುವೀದ್ ಮತ್ತು ಅಜಯ್ ಪ್ರತಾಪ್(ತೃತೀಯ), ಭಾವಗೀತೆಯಲ್ಲಿ ಅಮೃತ (ತೃತೀಯ) ಬಹುಮಾನ ಪಡೆದಿದ್ದಾರೆ.