ಸರ್ಕಾರಿ ನೌಕರರಿಗೆ 'ಹೃದಯ ಸಂಜೀವಿನಿ'
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 22
ದೀರ್ಘಕಾಲೀನ ಕಾಯಿಲೆ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ಹೃದಯ ÑÚMfÞɬ’ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಲ್. ಭೈರಪ್ಪ ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪುಟದಲ್ಲಿ ತೀರ್ಮಾನ: ಕೆಲ ದಿನಗಳ ಹಿಂದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ನಡೆಸಿದ ಸಭೆಯಲ್ಲಿ ಈ ತೀರ್ಮಾನವಾಗಿದೆ. ಇನ್ನೆರಡು ವಾರದಲ್ಲಿ ಈ ವಿಷಯವು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂತಿಮವಾಗಲಿದೆ. ಈ ಯೋಜನೆಯನ್ನು ಎಲ್ಲಾ ಕಾಯಿಲೆಗಳಿಗೂ ವಿಸ್ತರಿಸುವಂತೆ ನಾವು ರಾಜ್ಯ ಸರ್ಕಾರವನ್ನು ಕೋರಿದ್ದು, ಹಂತ-ಹಂತವಾಗಿ ಜಾರಿ ಮಾಡುವ ಭರವಸೆ ದೊರೆತಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ರಾಜೇಂದ್ರ ಬುರಡಿಕಟ್ಟಿ, ಇಂಗ್ಲಿಷ್ ನಂಬಿಕೊಂಡವರಿಗೆ ಮುಂದಿನ ದಿನಗಳಲ್ಲಿ ಗಂಡಾಂತರ ಬರಬಹುದು. ಏಕೆಂದರೆ ಇತ್ತಿಚೀನ ದಿನಗಳಲ್ಲಿ ಪ್ರಾದೇಶಿಕ ಭಾವನೆಗಳು ಹೆಚ್ಚಾಗುತ್ತಿವೆ ಎಂದ ಅವರು, ಸರ್ಕಾರಿ ನೌಕರರು ಸಾರ್ವಜನಿಕರಿಗೆ ಕಣ್ಣಿರು ಹರಿಸಬಾರದು ಎಂದರು.
ಸಾಹಿತಿ ಕಂನಾಡಿಗ ನಾರಾಯಣ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ. ಆರ್.ಎಂ. ಶೆಟ್ಟರ್, ಚಿತ್ರನಟಿ ಭವ್ಯ, ರಾಜ್ಯ ಸಂಘದ ಗೌರವ ಅಧ್ಯಕ್ಷ ಬಿ.ಎಂ. ಸಣ್ಣಮುದ್ದಯ್ಯ, ಪ್ರಧಾನ ಕಾಯದರ್ಶಿ ಪಟೇಲ್ ಪಾಂಡು ಮಾತನಾಡಿದರು.
ಜಿಲ್ಲಾ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಖಜಾಂಚಿ ಯೋಗಾನಂದ, ಜಂಟಿ ಕಾರ್ಯದರ್ಶಿ ಸಿ.ಬಿ. ಪಾಟೀಲ್, ಕೆ. ಬಸವನಗೌಡ, ವಿಭಾಗೀಯ ಉಪಾಧ್ಯಕ್ಷ ಕೆ.ಮುರಳೀಧರ್, ಜಿಲ್ಲಾ ಕಾರ್ಯದರ್ಶಿ ಆರ್. ಮೋಹನ್ ಕುಮಾರ್, ಗೌರವ ಅಧ್ಯಕ್ಷ ಎಸ್.ಆರ್. ಚಂದ್ರಪ್ಪ ಸೇರಿದಂತೆ ಹಲವರು ವೇದಿಕೆಯಲ್ಲಿ ಇದ್ದರು.
ಜಿಲ್ಲಾ ಸಂಘದ ಗೌರವ ಅಧ್ಯಕ್ಷ ಚಂದ್ರಪ್ಪ ಸ್ವಾಗತಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾ ಕೂಟವು ಡಿಸೆಂಬರ್ ಕೊನೆಯ ವಾರ ಮತ್ತು ಜನವರಿ ಮೊದಲನೇ ವಾರ ನಡೆಯಲಿದೆ.
--
ರಾಧಾಕೃಷ್ಣ ಶಾಲೆಯಲ್ಲಿ ಕನಕದಾಸ ಜಯಂತಿ
ಸಾಗರ: ತಾಲೂಕಿನ ವರದಹಳ್ಳಿ ರಸ್ತೆಯಲ್ಲಿರುವ ಬಾಲಭವನ ಸಂಸ್ಥೆಯ ರಾಧಾಕೃಷ್ಣ ಪಬ್ಲಿಕ್ ಶಾಲೆಯಲ್ಲಿ ಕನಕದಾಸ ಜಯಂತಿ ಅಂಗವಾಗಿ ಗೀತಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ನಡೆಸಿಕೊಟ್ಟ ಸಂಗೀತ ಕಲಾವಿದೆ ಸೀತಾ ಬಾಪಟ್ ಕನಕದಾಸರ ಕೀರ್ತನೆಗಳು ಸಮಾಜದ ಅಂಕುಡೊಂಮಕುಗಳನ್ನು ಸ್ಪಷ್ಟಪಡಿಸುತ್ತವೆ. ಅವರ ಕೀರ್ತನೆಗಳಿಂದ ನಾವು ನಮ್ಮನ್ನು ಹಾಗೂ ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳಬಹುದು ಎಂದರು.
ಕನಕದಾಸರ ಕೀರ್ತನೆಗಳ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಪ್ರಜ್ಞೆ, ಸಂಸ್ಕಾರಗಳನ್ನು ಮನದಟ್ಟು ಮಾಡಲು ಸಾಧ್ಯವಾಗುತ್ತದೆ. ಕೀರ್ತನೆಗಳು ಕೇವಲ ಸಂಗೀತದ ವಿದ್ಯಾರ್ಥಿಗಳಿಗೆ ಮಾತ್ರ ಪಠ್ಯವಲ್ಲ, ಸಮಾಜದ ಪಠ್ಯಗಳಾಗಿವೆ. ದಾಸ ಸಾಹಿತ್ಯದ ಮೂಲಕ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆಡಳಿತ ಮಂಡಳಿಯ ಆರ್.ಎಂ. ಬಾಪಟ್, ಪ್ರಾಚಾರ್ಯ ಗೋಪಾಲ ಹಾಜರಿದ್ದರು.