ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಂಟಿ.. ಅಡುಗೆ ರುಚಿ ಹೇಗಿದೆ ನೋಡಿ...

Vishwanath S
Updated On : 24 Nov 2013, 3:06 am

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ನ.23
ಅಂಕಲ್.. ಆಂಟಿ.. ನಾವು ಮಾಡಿರುವ ಅಡುಗೆ ರುಚಿ ನೋಡಿ ಹೇಗಿದೆ ಎಂದು ಹೇಳಿ.. ಪ್ಲೀಸ್...
- ಈ ದೃಶ್ಯ ಕಂಡು ಬಂದಿದ್ದು ನಗರದ ಸ್ಕೌಟ್ಸ್ ಭನದಲ್ಲಿ. ಶನಿವಾರ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ 10 ವರ್ಷದೊಳಗಿನ ಹಾಗೂ 10 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಏರ್ಪಡಿಸಿದ್ದ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಶಾಲೆಯ ಮಕ್ಕಳು ತಾವೇ ಸಿದ್ಧಪಡಿಸಿದ ಅಡುಗೆಯ ರುಚಿ ತಿಂದು ನೋಡುವಂತೆ ಮನವಿ ಮಾಡುತ್ತಿದ್ದರು.
ವಿದ್ಯಾಭಾರತಿ, ಮೇರಿ ಇಮ್ಯಾಕ್ಯುಲೇಟ್, ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ ಹಾಗೂ ಕಸ್ತೂರಿ ಬಾ ಶಾಲೆ ಸೇರಿದಂತೆ ವಿವಿಧ ಶಾಲೆಯಿಂದ ಸುಮಾರು 300 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ವಿವಿಧ ರೀತಿಯ ತಿನಿಸು ಸಿದ್ಧಪಡಿಸಿದರು.
ಒಲೆ ಉಪಯೋಗಿಸಿ ಸಿದ್ಧಪಡಿಸಿದ ಅಡುಗೆ ಒಂದು ಕಡೆಯಾದರೆ, ಒಲೆಯೇ ಉಪಯೋಗಿಸದೆ ಸಿದ್ಧಪಡಿಸಿದ ತಿನ್ನಿಸುಗಳು ಮತ್ತೊಂದೆಡೆ. ಹೀಗೆ ಎರಡು ರೀತಿಯಲ್ಲಿ ವಿದ್ಯಾರ್ಥಿಗಳು ಅಡುಗೆ ಸಿದ್ಧಪಡಿಸಿದ್ದರು.
ಅಡುಗೆಗೆ ಬೇಕಾದ ಎಲ್ಲಾ ರೀತಿಯ ಉಪಕರಣಗಳು, ಪದಾರ್ಥಗಳನ್ನು ವಿದ್ಯಾರ್ಥಿಗಳೇ ತಂದಿದ್ದರು. ಒಲೆ ಉಪಯೋಗಿಸಿ ಪಲಾವ್, ಮೆಕ್ಸಿಕನ್ ರೈಸ್, ಟಮೋಟಾ ಚಿಪ್ಸ್, ವಡಾ, ಬೊಂಡಾ, ದೋಸಿ, ಚಪಾತಿ, ಅಲವಾ, ಅನ್ನ ಸಾಂಬರ್ ಸಿದ್ಧಪಡಿಸಿದರೆ, ಮತ್ತೊಂದೆಡೆ ಒಲೆಯೇ ಉಪಯೋಗಿಸದೆ ಜ್ಯೂಸ್, ಪಾನಿಪುರಿ, ರಸಾಯನ ಸೇರಿದಂತೆ ಹಲವು ಖಾದ್ಯಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದರು.
ಸ್ಪರ್ಧೆಯಲ್ಲಿ ಲಕ್ಷ್ಮೀ ಗೋಪಿನಾಥ್, ಶ್ರೀರಂಜಿನಿ ದತ್ತಾತ್ರಿ ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧಿಕಾರಿಗಳು ಒಟ್ಟು 2 ವಿಭಾಗದಿಂದ 8 ಜನ ತೀರ್ಪುಗಾರರಿದ್ದರು. ಸ್ಪರ್ಧೆಯ ನೇತೃತ್ವವನ್ನು ನೂರ್ ಅಹಮದ್, ರಾಜೇಶ್ ಬಿ. ಅವಲಕ್ಕಿ, ರೇಣುಕಾರಾಧ್ಯ ಮತ್ತಿತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement