ರೋಟರಿಗೆ ದ್ವಿತೀಯ ಸ್ಥಾನ
ಶಿವಮೊಗ್ಗ: ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಲಯ ಮಟ್ಟದ ಪ್ರತಿಭಾ ಸಂಗಮ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ದ್ವಿತೀಯ ಬಹುಮಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ಸಮೂಹ ಗಾಯನದಲ್ಲಿ ಪ್ರಥಮ ಸ್ಥಾನ, ಸೋಲೊ ಹಾಡಿನಲ್ಲಿ ಪ್ರಥಮ ಸ್ಥಾನ, ಸಮೂಹ ನೃತ್ಯದಲ್ಲಿ ದ್ವಿತೀಯ, ಮೂಖಾಭಿನಯದಲ್ಲಿ ದ್ವಿತೀಯ, ಏಕಪಾತ್ರ ಅಭಿನಯದಲ್ಲಿ ದ್ವಿತೀಯ, ಕಿರುಪ್ರಹಸನದಲ್ಲಿ ತೃತೀಯ ಸ್ಥಾನಗಳಿಸಿದೆ. ನ.30ರಂದು ಮೈಸೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ವಿಜೇತರಿಗೆ ವಲಯ ಸಂಯೋಜಕ ಜಿ.ಎನ್.ಎನ್. ಮೂರ್ತಿ, ಅಸಿಸ್ಟೆಂಟ್ ಗೌವರ್ನರ್ ಎಸ್.ಜಿ. ಆನಂದ್, ಟ್ರೋಫಿ, ಪ್ರಮಾಣ ಪತ್ರ, ಬಹುಮಾನ ನೀಡಿ ಗೌರವಿಸದರು.
ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಅಧ್ಯಕ್ಷ ಕೆ.ಎಸ್. ಪುರುಷೋತ್ತಮ್, ಇನ್ನರ್‌ವೀಲ್ ಅಧ್ಯಕ್ಷೆ ಸೃಜಯ ಪುರುಷೋತ್ತಮ್, ಕಾರ್ಯಕ್ರಮ ಸಂಚಾಲಕ ಜಿ. ವಿಜಯಕುಮಾರ್, ಎಂ.ಎಲ್. ಪ್ರತಾಪ್, ಕಾರ್ಯದರ್ಶಿ ಬಿ. ಪ್ರಸನ್ನಕುಮಾರ್, ಮಾಜಿ ಜಿಲ್ಲಾ ಗೌವರ್ನರ್ ಎಚ್.ಎಲ್. ರವಿ, ಡಾ. ಸುಧೀಂದ್ರ, ಬಿಂದು ವಿಜಯಕುಮಾರ್ ಹಾಗೂ ಇನ್ನರ್‌ವೀಲ್ ಸದಸ್ಯರು ಇದ್ದರು.