ಇಂದು ಪೆಟ್ರೋಲ್, ಡೀಸೆಲ್‌ಗೆ ತ್ರಾಸು
ಶಿವಮೊಗ್ಗ: ಹಾಸನದಲ್ಲಿ ಟರ್ಮಿನಲ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಫಲವಾಗಿ ಶಿವಮೊಗ್ಗದ ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಬಂಕ್‌ಗಳಲ್ಲಿ ಬುಧವಾರ ಸಂಜೆಯಿಂದ ಪೆಟ್ರೋಲ್ ಹಾಗೂ ಡೀಸೆಲ್ ವಿತರಣೆ ಸ್ಥಗಿತಗೊಂಡಿತು.
ಹುಣಸೂರು ಬಳಿ ನಡೆದ ಶಾರ್ಟ್ ಸರ್ಕ್ಯೂಟ್ ಪ್ರಕರಣದ ಮುಂದುವರಿದ ಭಾಗವಾಗಿ ಪ್ರತಿಭಟನೆ ಮುಂದುವರಿದಿದ್ದು, ಹಾಸನ ಟರ್ಮಿನಲ್‌ನಿಂದ ಶಿವಮೊಗ್ಗ ಕಡೆ ಪೆಟ್ರೋಲ್, ಡೀಸೆಲ್‌ನ ಯಾವುದೇ ಟ್ಯಾಂಕರ್‌ಗಳು ಮಂಗಳವಾರದಿಂದ ಹೊರಟಿಲ್ಲ.
ಹೀಗಾಗಿ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಬುಧವಾರ ಮುಂಜಾನೆಯಿಂದಲೇ ಪೆಟ್ರೋಲ್, ಡೀಸೆಲ್ ಬರಿದಾಗುತ್ತಾ ಬಂದಿತು. ರಾತ್ರಿ ವೇಳೆಗೆ ಪೆಟ್ರೋಲ್ ವಿತರಣೆ ಸ್ಥಗಿತ ಬೋರ್ಡ್‌ಗಳು ತೂಗಾಡಲಾರಂಭಿಸಿದವು.
ನಗರದಲ್ಲಿರುವ 6 ಪೆಟ್ರೋಲ್ ಬಂಕ್‌ಗೆ ಇಂಡಿಯನ್ ಆಯಿನ್ ಮಂಗಳೂರು ಟರ್ಮಿನಲ್‌ನಿಂದ ಪೆಟ್ರೋಲ್ ವಿತರಣೆಯಾಗುತ್ತಿದ್ದು, ಅಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಉಳಿದ ಬಂಕ್‌ಗಳಲ್ಲಿ ನಾಳೆ ಸಂಜೆ ವರೆಗೂ ಪೆಟ್ರೋಲ್ ವಿತರಣೆ ಇಲ್ಲವಾಗಲಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಶಿವಮೊಗ್ಗ ಪೆಟ್ರೋಲ್ ಡೀಲರ್ ಅಸೋಸಿಯೇಷನ್ ಡಿ.ಎಸ್. ಅರುಣ್, ಶಿವಮೊಗ್ಗಕ್ಕೆ ಮಂಗಳೂರಿನಿಂದ ಪೆಟ್ರೋಲ್ ತರಿಸುವ ಸಂಬಂಧ ಮಾತುಕತೆ ನಡೆದಿದೆ. ಗುರುವಾರ ಬೆಳಿಗ್ಗೆ ಮಾತುಕತೆ ಸಫಲವಾಗಿ ಪೆಟ್ರೋಲ್, ಡೀಸಲ್ ಸರಬರಾಜಾದರೆ ಸಂಜೆ ವೇಳೆಗೆ ಸಮಸ್ಯೆ ಪರಿಹಾರವಾಗಲಿದೆ ಎಂದು ವಿವರಿಸಿದರು.
ಹಾಸನದಲ್ಲಿ ಶಿವಮೊಗ್ಗಕ್ಕೆ ಇಂಧನ ಸರಬರಾಜು ಮಾಡಬೇಕಾದ ಟ್ಯಾಂಕರ್‌ಗಳನ್ನು ಬ್ಯಾರಿಕೇಡ್ ಹಾಕಿ ತಡೆದು ನಿಲ್ಲಿಸಿರುವ ಕಾರಣ ಮಂಗಳೂರಿನಿಂದ ಸುಲಲಿತವಾಗಿ ಇಂಧನ ಸರಬರಾಜು ಮಾಡಲು ಕಷ್ಟವಾಗಲಿದ ಎಂಬ ಮಾತಿದೆ.
ಒಟ್ಟಾರೆ ಶಿವಮೊಗ್ಗದಲ್ಲಿ ಗುರುವಾರ ಪೆಟ್ರೋಲ್, ಡೀಸಲ್‌ಗಾಗಿ ಉದ್ದುದ್ದ ಸರತಿಯಲ್ಲಿ ನಿಲ್ಲುವುದು ಅನಿವಾರ್ಯವಾಗಲಿದೆ.