ಅಪಘಾತ: ವ್ಯಕ್ತಿ ಸಾವು
ಶಿರಾಳಕೊಪ್ಪ: ಶಿರಾಳಕೊಪ್ಪದ ಕಡೆ ಬರುತ್ತಿದ್ದ ಮಹೇಂದ್ರ ಪಿಕಪ್ ವಾಹನದಲ್ಲಿ ಕೊರಟಿಕೆರೆ ಗ್ರಾಮದ ಬಳಿ ಟಯರ್ ಸಿಡಿದು ವಾಹನ ಪಕ್ಕದಲ್ಲಿ ಇದ್ದ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಚಾಲಕ ಶೇರ್ ಅಲಿ(35) ಎಂಬುವರು ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಗುರುವಾರ ಬೆಳಗ್ಗೆ ಶುಂಠಿ ತುಂಬಿಕೊಂಡು ಬರುತ್ತಿರುವಾಗ ಈ ಘಟನೆ ಸಂಭವಿಸಿದೆ. ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಗೆ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಶಿಕಾರಿಪುರ ಡಿಎಸ್.ಪಿ ಇಸಾಕ್ ಹಾಗು ಸೊರಬ ವೃತ್ತ ನಿರೀಕ್ಷಕ ಡಿ.ನಾಗರಾಜ್ ಭೇಟಿ ನೀಡಿದ್ದರು. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ: ಶಿರಾಳಕೊಪ್ಪ ಹತ್ತಿರದ ಕೊರಟಿಕೆರೆ ಗ್ರಾಪಂ ವ್ಯಾಪ್ತಿಯ ರಾಗಿಕೊಪ್ಪ ಗ್ರಾಮದಲ್ಲಿ ಪರಮೇಶಿ(30) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--