ಅರ್ಜಿ ಆಹ್ವಾನ
ಶಿವಮೊಗ್ಗ: ಶಿವಮೊಗ್ಗ ಡಿವೈಎಸ್ಪಿ ಕಚೇರಿಯಲ್ಲಿರುವ ಹಿರಿಯ ನಾಗರೀಕರ ಸಹಾಯವಾಣಿಯಲ್ಲಿ ಖಾಲಿ ಇರುವ ಸಲಹೆಗಾರರು, ಕೌನ್ಸಿಲರ್ಸ್ 2 ಹುದ್ದೆ ಹಾಗೂ ಕಚೇರಿ ಸಹಾಯಕರ ಒಂದು ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೌನ್ಸಿಲರ್ಸ್ ಹುದ್ದೆಗೆ ಎಂಎಸ್ಣಡಬ್ಲ್ಯೂ ವಿದ್ಯಾರ್ಹತೆ ನಿಗದಿಪಡಿಸಿದ್ದು, 10 ಸಾವಿರ ಹಾಗೂ ಸಹಾಯಕರ ಹುದ್ದೆಗೆ ಕನಿಷ್ಟ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದವರಾಗಿದ್ದು, ಮಾಸಿಕ 6 ಸಾವಿರ ಗೌರವಧನ ನೀಡಲಾಗುವುದು. ಆಯ್ಕೆಯಾದವರು ವಾರದ ಏಳು ದಿನ 24 ಗಂಟೆ ಕಾಲ ಸರದಿಯ ಮೇಲೆ ಕಾರ್ಯನಿರ್ವಹಿಸಲು ಸಿದ್ದರಿರಬೇಕು. ಆಸಕ್ತರು ಡಿಸೆಂಬರ್ 3ರೊಳಗಾಗಿ ಹಿರಿಯ ನಾಗರಿಕರ ಸಹಾಯವಾಣಿ, ಡಿವೈಎಸ್ಪಿ ಕಚೇರಿ, ಸಾಗರ ರಸ್ತೆ, ಶಿವಮೊಗ್ಗ ಇವರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಡಿಸೆಂಬರ್ 7ರಂದು ಬೆಳಿಗ್ಗೆ 11ರಿಂದ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬೇಕು. ವಿವರಗಳಿಗಾಗಿ ದೂ.08182-261400, 221188ನ್ನು ಸಂಪರ್ಕಿಸಿ.