ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಂಗಳ ಮಂದಿರ ಲೋಕಾರ್ಪಣೆ

Lingaraj Badiger
Updated On : 29 Nov 2013, 10:38 am

ಶಿವಮೊಗ್ಗ: ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಪರಿಪೂರ್ಣ ಹಾಗೂ ಸನಾತನ ಸಂಸ್ಕೃತಿಯಾಗಿದೆ. ಹಿಂದೆ ಆಧ್ಯಾತ್ಮ ಚಿಂತನೆಗೆ ಭಾರತದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿತ್ತು. ಈ ಮೂಲಕ ಮಹನೀಯರು ಸಾಕಷ್ಟು ಗ್ರಂಥ ರಚಿಸಿದರು. ಇಂತಹ ಒಂದು ಮಹಾನ್ ಕಾರ್ಯ ನಡೆಯಬೇಕಾಗಿದೆ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ವಿನೋಬನಗರ ಶ್ರೀ ರಾಮಾನುಜ ಸೌಹಾರ್ದ ಪತ್ತಿನ ಸಹಕಾರಿ ಸಂಘದ ದಶಮಾನೋತ್ಸವ ಹಾಗೂ ಆಲ್ಕೊಳ ಬಳಿ ನಿರ್ಮಿಸಲಾಗಿರುವ ಮಂಗಳ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆತ್ಮ ಕಲ್ಯಾಣ ಎಂಬುದು ನಿಜವಾದ ಮಂಗಳ ಬದುಕು. ಹೀಗಾಗಿ ಮಂಗಳ ಮಯವಾಗಲು ಪರಮಾತ್ಮನಲ್ಲಿ ಶುದ್ಧ ಭಕ್ತಿ ಹೊಂದಿರಬೇಕು ಎಂದರು.  
ಮಾರ್ಗದರ್ಶ ಅಗತ್ಯ:  ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಗುರಿ ಸಾಧಿಸಲು ಹಾಗೂ ಉತ್ತಮ ಜೀವನ ನಡೆಸಲು ಗುರುವಿನ ಮಾರ್ಗದರ್ಶನ ಅವಶ್ಯಕ. ನಮ್ಮಲ್ಲಿರುವ ಶಕ್ತಿ ಹಾಗೂ ನಿಜತ್ವವನ್ನು ತಿಳಿದುಕೊಳ್ಳಲು ಸಮರ್ಥ ಗುರುಗಳ ಮಾರ್ಗದರ್ಶನದಿಂದ ಮಾತ್ರ ಸಾಧ್ಯ ಎಂದು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬಿ.ಎನ್.ಕೃಷ್ಣನ್ ತಿಳಿಸಿದರು.
ಎಂ.ಎನ್. ಅಶ್ವತ್ಥನಾರಾಯಣ, ಯು.ಆರ್.ರಾಮಸ್ವಾಮಿ ಐಯ್ಯಂಗಾರ್, ಬಿ.ಎಸ್.ಅಶ್ವತ್ಥ, ಎಂ.ಎನ್.ಸುಂದರರಾಜ್, ಗೋಪಾಲ್, ಲತಾ ಶೇಷಾದ್ರಿ, ಎಂ.ಆರ್.ಶೇಷಾದ್ರಿ, ಪ್ರಹ್ಲಾದ್ ರಾವ್, ಅನಂತರಾಮು ಮತ್ತಿತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement