ಕನಕದಾಸ ಭಕ್ತಿ ಸಾಮ್ರಾಜ್ಯದ ಸಾಮ್ರಾಟ
ಶಿವಮೊಗ್ಗ: ಅರ್ಪಣಾ ಭಾವ, ಭಕ್ತಿ ಹಾಗೂ ಜ್ಞಾನ ಮಾರ್ಗಗಳನ್ನು ತಿಳಿಸಿರುವ ಕನದಾಸರು ಭಕ್ತಿ ಸಾಮ್ರಾಜ್ಯದ ಸಾಮ್ರಾಟ ಎಂದು ದೇವದುರ್ಗದ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ತಿಳಿಸಿದರು.
ಪಂತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ ಹಾಗೂ ಪತಂಜಲಿ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಶುಕ್ರವಾರ ಪತಂಜಲಿ ಯೋಗವುಂದಿರದಲ್ಲಿ ಹಮ್ಮಿಕೊಂಡಿದ್ದ 526ನೇ ಶ್ರೀ ಕನಕದಾಸರ ಜಯಂತಿ, ರಾಜ್ಯ ಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ, ತರಬೇತಿ ಕಾರ್ಯಾಗಾರ ಹಾಗೂ ನೂತನವಾಗಿ ನಿರ್ಮಾಣಗೊಂಡ ಯೋಗ ಕಲಾ ಮಂದಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರನ್ನು ಪ್ರಾರ್ಥಿಸುವುದು ಶ್ರೀಮಂತಿಕೆ, ಆಸೆ, ಆಕಾಂಕ್ಷೆಗಳನ್ನು ಈಡೇರಿಸಲು ಅಲ್ಲ. ಬದುಕಿನ ಸಮಯೋಚಿತ್ತತೆ ಕಾಪಾಡಿಕೊಳ್ಳಲು. ಜ್ಞಾನ ಸಂಪಾದನೆಗಾಗಿ ಭಕ್ತಿಯ ಅವಶ್ಯಕತೆ ಇದೆ. ಜಾತಿ, ಮತ, ಲಿಂಗದಿಂದ ಅನುಗ್ರಹ ಪಡೆಯುವುದು ಮುಖ್ಯವಲ್ಲ. ಕನಕದಾಸರು ಭಕ್ತಿಯಿಂದಲೇ ದೇವರನ್ನು ಒಲಿಸಿಕೊಂಡಿದ್ದರು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಚಂದ್ರಾಕಾಂತ್ ಮಾತನಾಡಿದರು.
ವೇದಿಕೆಯಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಗೌರವ ಅಧ್ಯಕ್ಷ ಎಂ. ಈಶ್ವರಪ್ಪ, ಕಾಳಿದಾಸ ಸೇವಾಸಂಸ್ಥೆಯ ಅಧ್ಯಕ್ಷ ಪಿ. ಬಾಲಪ್ಪ, ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಎಂ.ಎನ್. ಸುಂದರರಾಜ್, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪತಂಜಲಿ ಜೆ. ನಾಗರಾಜ್, ಜಿ.ಆರ್. ಕೇಶವಮೂರ್ತಿ, ಗರ್ತಿಕೆರೆ ರಾಘಣ್ಣ ಮತ್ತಿತರರು ಇದ್ದರು.