ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೈತನ ಆತ್ಮಹತ್ಯೆಗೆ ಸರ್ಕಾರವೇ ಹೊಣೆ

Vishwanath S
Updated On : 1 Dec 2013, 12:53 pm

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ನ. 30
 ರೈತ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕಬ್ಬು ಬೆಳೆಗಾರ ವಿಠಲ್ ಅರಭಾವಿ ವಿಷ ಸೇವನೆಗೆ ಸರ್ಕಾರ ನೇರಹೊಣೆ ಎಂದು ಆಪಾದಿಸಿ ರೈತರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿ ಉಪ-ತಹಶೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು  ಶಿರಾಳಕೊಪ್ಪ ಪಟ್ಟಣದ ಬಸ್ಸು ನಿಲ್ದಾಣದ ವ್ರತ್ತದಲ್ಲಿ ಉಡಗಣಿ-ತಾಳಗುಂದ ಹೋಬಳಿ ರೈತಹೋರಾಟಸಮಿತಿ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಕೆಲಸಮಯ ಘೋಷಣೆ ಕೂಗಿ ನಂತರ ನಾಡಕಚೇರಿಗೆ ಆಗಮಿಸಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.
 ರೈತನಾಯಕ ವೀರಣ್ಣ ಮಾತನಾಡಿ ರೈತರು ಇಂದು ಸಂಕಷ್ಟದಲ್ಲಿದ್ದಾರೆ,ಅವರ ಬೆಳೆಗೆ ಸರ್ಕಾರ ಕೊಡುತ್ತಿರುವ ಬೆಂಬಲ ಬೆಲೆ ಸಾಕಾಗದು. ತಕ್ಷಣ ಕನಿಷ್ಠ 2ಸಾವಿರ ರು. ಗಳನ್ನಾದರೂ ಘೋಷಿಸಬೇಕು ಎಂದರು.   ರೈತನಾಯಕರಾದ ನೇರಲಗಿ ಭರ್ಮಣ್ಣ, ಮುಗಳಿಕೊಪ್ಪದ ಹೇಮಣ್ಣ, ಮಾತನಾಡಿದರು. ರೈತಹೋರಾಟ ಸಮತಿ ಕಾರ್ಯದರ್ಶಿ ಉಡಗಣಿ ಕೊಟ್ರೇಶ್ ಉಪ- ತಹಶೀಲ್ದಾರ್‌ಗೆ ಮನವಿ ಅರ್ಪಿಸಿದರು.  ಮೆರವಣಿಗೆ ನೇತ್ರತ್ವವನ್ನು ಹೋರಾಟಸಮಿತಿಯ ರಾಜಣ್ಣ ಹಾಗು ಪದಾದಿಕಾರಿಗಳು ವಹಿಸಿದ್ದರು. ಪ್ರತಿಭಟನೆಯಲ್ಲಿ ಹಲವಾರು ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement