ಇಂದು ಶ್ರಾವಣ ಸಂಭ್ರಮ
ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತ್ಯಾವರ ಚಟ್ನಹಳ್ಳಿಯ ಬೃಂದಾವನ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ಸೆ.2ರಂದು ಶ್ರಾವಣ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.
ಗಾಂಧಿ ಬಜಾರ್‌ನ ಶ್ರೀ ಕನ್ಯಕಾ ಪರಮೇಶ್ವರಿ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ನಗರಸಭಾ ಸದಸ್ಯ ರಮೇಶ್ ಕಾರ್ಯಕ್ರಮ ಉದ್ಘಾಟಿಸುವರು. ಕೋಟೆ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಜಯರಾಜ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸುಧೀರ್ ಕುಮಾರ್ ಬಂಟ್ವಾಳ, ಮಹಿಳಾ ಜ್ಞಾನ ವಿಕಾಸ ಕೇಂದ್ರದ ನಿರ್ದೇಶಕಿ ಮಮತಾ ರಾವ್, ನಗರಸಭಾ ಸದಸ್ಯೆ ಅರ್ಚನಾ ಬಳ್ಳೆಕೆರೆ ಅತಿಥಿಯಾಗಿ ಪಾಲ್ಗೊಳ್ಳುವರು.
ಬೆಳಿಗ್ಗೆ 11.30ಕ್ಕೆ ನಡೆಯುವ ಮೊದಲ ವಿಚಾರ ಗೋಷ್ಠಿಯಲ್ಲಿ ಜಗದೀಶ್ ಅಲ್ಸೆ ಅಧ್ಯಕ್ಷತೆ ವಹಿಸಲಿದ್ದು, ಸದ್ಗುರು ಚಿಕಿತ್ಸಾಲಯದ ಡಾಣಚಿತ್ರಲೇಖ ಎ.ಕೃಷ್ಣ ಅವರು ಆರೋಗ್ಯ ಮತ್ತು ಪೌಷ್ಟಿಕ ಆಹಾರ ಕುರಿತು ಮಾಹಿತಿ ನೀಡುವರು. ನಗರಸಭಾ ಸದಸ್ಯೆ ಸುನಿತಾ ಅಣ್ಣಪ್ಪ ಉಪಸ್ಥಿತರಿರುವರು.
ಮಧ್ಯಾಹ್ನ 12.30ರಿಂದ ನಡೆಯುವ 2ನೇ ವಿಚಾರ ಗೋಷ್ಠಿಯಲ್ಲಿ ಮಹಿಳೆ ಮತ್ತು ಕಾನೂನು ಕುರಿತು ಜಮೀಲಾ ಖಾನಂ ಮಾತನಾಡುವುದು. ಶಾಂತಾ ನಾಯಕ್, ರೇಖಾ ಚಂದ್ರಶೇಖರ್ ಉಪಸ್ಥಿತರಿರುವರು.