ನೈತಿಕ ಮೌಲ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಗತ್ಯ
ದಾವಣಗೆರೆ: ವೈದ್ಯ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ ತಿಳಿಸಿಕೊಡುವ ಉದ್ದೇಶದಿಂದ ಹಮ್ಮಿಕೊಂಡಿದ್ದ 2 ದಿನಗಳ ದಕ್ಷಿಣ ಭಾರತ ಮಟ್ಟದ ವೈದ್ಯ ವಿದ್ಯಾರ್ಥಿಗಳ ಸಮಾವೇಶ “«æç~OÚ- 13’ ಸಮಾರೋಪ ಸಮಾರಂಭ ನಗರದ ಎಸ್ಸೆಸ್ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾನೂನು ವಿಶ್ವ ವಿದ್ಯಾನಿಲಯದ ಕುಲ ಸಚಿವ ಡಾ. ಬಿ.ಎಸ್. ರೆಡ್ಡಿ ಮಾತನಾಡಿ, ನೈತಿಕತೆ ಹಾಗೂ ನೈತಿಕ ಮೌಲ್ಯಗಳು ಎಲ್ಲಾ ವೃತ್ತಿಗಳಿಗೂ ಅತಿ ಅವಶ್ಯಕ. ಬರೀ ವೈದ್ಯ ವೃತ್ತಿಗಷ್ಟೇ ನೈತಿಕತೆ ಎಂಬುದು ಸೀಮಿತವಾಗಿಲ್ಲ. ವೈದ್ಯರು ಮಾನವೀಯ ಮೌಲ್ಯ ಅಳವಡಿಸಿಕೊಂಡಲ್ಲಿ ದೇವರಿಗೆ ಸಮಾನವಾಗಬಲ್ಲರು ಎಂದರು.
ಸಮಾನತೆ ಅಗತ್ಯ: ಪ್ರತಿಯೊಬ್ಬ ರೋಗಿಯನ್ನೂ ಸಮಾನವಾಗಿ ಕಾಣಬೇಕು. ಶ್ರೀಮಂತ ರೋಗಿ ವೈದ್ಯರಿಗೆ ಪೇ ಮಾಡಿದರೆ, ಬಡ ರೋಗಿ ನಿಮಗಾಗಿ ಪ್ರೇ ಮಾಡುತ್ತಾನೆ. ಯಾವುದೇ ರೋಗಿ ಬಂದರೂ, ಅಂತಹ ರೋಗಿಗೆ ಚಿಕಿತ್ಸೆ ನೀಡಬೇಕೆ ಹೊರತು, ನಾನು ಖಾಸಗಿ ವೈದ್ಯ. ರೋಗಿಗಳನ್ನು ಹೀಗೆಲ್ಲಾ ನೋಡುವುದಿಲ್ಲ ಎನ್ನಲಾಗುವುದಿಲ್ಲ. ವೈದ್ಯರು ಹಾಗೂ ಕಾನೂನಿನ ಚೌಕಟ್ಟಿನ ಬಗ್ಗೆಯೂ ಅರಿಯಬೇಕು. ಗ್ರಾಹಕರ ಕಾಯ್ದೆ ಬಗ್ಗೆಯೂ ತಿಳಿವಳಿಕೆ ಹೊಂದಿರಬೇಕು ಎಂದು ಅವರು ತಿಳಿಸಿದರು.
ಜಾಗ್ರತೆ ಇರಲಿ: ಬೆಂಗಳೂರಿನ ಆಂತರಿಕ ಭದ್ರತೆಯ ಐಜಿಪಿ ಸಂಜಯ್ ಸಹಾಯ್ ಮಾತನಾಡಿ, ವೈದ್ಯಕೀಯ ನಿರ್ಲಕ್ಷ್ಯದಿಂದ ಆಗುವ ಅನಾಹುತ ಅರಿತು, ವೈದ್ಯರು, ವೈದ್ಯಕೀಯ ಸೇವೆಯಲ್ಲಿದ್ದವರು ಸದಾ ಜಾಗ್ರತೆ, ಎಚ್ಚರಿಕೆ, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಯುವ ಪೀಳಿಗೆ ವೈದ್ಯ ವಿದ್ಯಾರ್ಥಿಗಳಿಂದ ಸಾಕಷ್ಟು ಬದಲಾವಣೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ವೈದ್ಯ ವಿದ್ಯಾರ್ಥಿಗಳು ಕೈಜೋಡಿಸುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂದರು.
ಹಿರಿಯ ಲೇಖಕಿ ಡಾ. ಶಶಿಕಲಾ ಪಿ. ಕೃಷ್ಣಮೂರ್ತಿ, ಕಾರ್ಯದರ್ಶಿ ಡಾ. ಜಯಸಿಂಹ, ವಿದ್ಯಾರ್ಥಿ ಪದಾಧಿಕಾರಿಗಳಾದ ನಮ್ರತಾ, ಶಶಿಶೇಖರ್, ಜಯಂತ್, ದೇವಿಕಾ ಇತರರು ಇದ್ದರು. ಸಮಾವೇಶದ ಅಂಗವಾಗಿ ನಡೆದ ಅಣಕು ಕೋರ್ಟ್, ವ್ಯಂಗ್ಯಚಿತ್ರ, ಚರ್ಚಾಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
--