ರಾಗಿ ಕೃಷಿ ಶ್ರಮ ವಿನಿಮಯ
ಭದ್ರಾವತಿ: ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ತಂಡಗಳ ಶ್ರಮವಿನಿಮಯ ವೀಕ್ಷಣೆಗೆ ಕಡೂರು ತಾಲೂಕಿನಿಂದ ಆಗಮಿಸಿದ್ದ ಐವತ್ತು ಮಂದಿ ರೈತರಿಗೆ ಪರಮೇಶ್ವರ ಮತ್ತು ಸಿದ್ದಲಿಂಗೇಶ್ವರ ಪ್ರಗತಿಬಂಧು ತಂಡದ ಸದಸ್ಯರು ರಾಗಿ ಕೃಷಿ ನಿರ್ವಹಣೆ ಮಾಡುವುದರ ಮೂಲಕ ಶ್ರಮವಿನಿಮಯದ ಮಹತ್ವ ತಿಳಿಸಿಕೊಟ್ಟರು.
ವಾರಕ್ಕೊಂದು ದಿನ ಶ್ರಮವಿನಿಮಯ ಮಾಡುವುದರ ಮೂಲಕ ಕೂಲಿ ಆಳುಗಳ ಸಮಸ್ಯೆ ನಿವಾರಣೆಯಾಗಿ ರೈತರ ಸಮುದಾಯ ಸಂಘಟನೆ ಮತ್ತು ಕೃಷಿ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎನ್ನುವ ಮಹತ್ವವನ್ನು ಅಧ್ಯಯನಕ್ಕೆ ಬಂದ ರೈತರು ತಿಳಿದುಕೊಂಡರು.
ಶ್ರಮವಿನಿಮಯದ ಪ್ರಾತ್ಯಕ್ಷಿಕೆಯಲ್ಲಿ ಕೃಷಿ ಅಧಿಕಾರಿ ಗಣಪತಿ ಭಟ್, ಕಡೂರು ತಾಲೂಕಿನ ಹೈನುಗಾರಿಕೆ ಅಧಿಕಾರಿ ಸಂತೋಷ್, ಗಂಗಾಧರ, ಬಸವಯ್ಯ, ಕಾಶಿರಾಜು, ಗವಿಸಿದ್ದೇಶ್ವರ, ಬಿ.ರಾಜು, ಸೇವಾಪ್ರತಿನಿಧಿಗಳಾದ ದುರ್ಗಮ್ಮ, ಶಂಕರಪ್ಪ, ಸುಬ್ಬರಾಜು, ರೂಪಶ್ರೀ, ಜಯಮ್ಮ, ಲಕ್ಷ್ಮಿದೇವಿ, ಮಂಜುನಾಥ್ ಇದ್ದರು.
--