ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭೂ ಸ್ವಾಧೀನ ಕೈಬಿಡಲು ಗ್ರಾಮಸ್ಥರ ಆಗ್ರಹ

Lingaraj Badiger
Updated On : 3 Sept 2013, 11:09 am

ಶಿವಮೊಗ್ಗ: ಗೋಪಶೆಟ್ಟಿಕೊಪ್ಪ ಗ್ರಾಮದ ಕೆರೆಯ ಅಚ್ಚುಕಟ್ಟು ನೀರಾವರಿ ಜಮೀನುಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದವರು ಭೂ ಸ್ವಾಧೀನಪಡಿಸಿಕೊಳ್ಳುವುದನ್ನು ಕೈಬಿಡಬೇಕೆಂದು ಗೊಪಶೆಟ್ಟಿಕೊಪ್ಪ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಗ್ರಾಮದಲ್ಲಿ ಸಣ್ಣ ಹಾಗೂ ಹಿಂದುಳಿದ ರೈತರಿದ್ದಾರೆ. ಕೆರೆಯ ಸರ್ವೆ ನಂ. 95ರ ವಿಸ್ತೀರ್ಣ 37 ಎಕರೆ 05 ಗುಂಟೆ ಇದ್ದು, ಸುಮಾರು 150 ಎಕರೆಗೆ ನೀರಾವರಿಯಾಗುತ್ತಿದೆ. ರೈತರು ಎರಡು ಬೆಳೆ ಬತ್ತ ಬೆಳೆಯುತ್ತಿದ್ದಾರೆ. ಜೊತೆಗೆ ಅಡಕೆ ಮತ್ತು ತೆಂಗಿನ ತೋಟ ಇದೆ. ಇಂತಹ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರ ಈ ಪ್ರದೇಶದ 107 ಎಕರೆಯನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಭೂ ಸ್ವಾಧೀನ ಕಾನೂನಿನಲ್ಲಿ ಫಲವತ್ತಾದ ನೀರಾವರಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬಾರದೆಂದು ಕಾಂಗ್ರೆಸ್, ಜನತಾದಳ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿದ್ದವು. ಅಂದಿನ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಕೊಟ್ಟಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವುದಾಗಿ ತಿಳಿಸಿದರು. ಆದರೆ, ಇಲ್ಲಿವರೆಗೂ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಬಗ್ಗೆ ಯಾವುದೇ ಪತ್ರ ಬಂದಿಲ್ಲ. ಆದ್ದರಿಂದ ಫಲವತ್ತಾದ ನೀರಾವರಿ ಭೂಮಿಯನ್ನು ಸ್ವಾಧೀನ ಪಡೆದುಕೊಳ್ಳುವುದನ್ನು ಕೈಬಿಡಬೇಕೆಂಬುದು ನಮ್ಮ ಆಗ್ರಹ ಎಂದು ರೈತರು ತಿಳಿಸಿದರು.
ಮನವಿ ಸಲ್ಲಿಸುವಾಗ ರುದ್ರೇಶಪ್ಪ, ಕರಿಬಸಪ್ಪ, ಈರೇಶಪ್ಪ, ಮಂಜನಾಯ್ಕ, ರವಿ, ಯೋಗೀಶ್, ಗೀತಾ, ನೀಲಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement