ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಂಗನವಾಡಿ ಕೇಂದ್ರಕ್ಕೆ ಶಾಸಕ ದಿಢೀರ್ ಭೇಟಿ

Vishwanath S
Updated On : 5 Sept 2013, 11:36 am

ಕ.ಪ್ರ.ವಾರ್ತೆ  ಸೊರಬ  ಸೆ.4 ಇಲ್ಲಿನ ಅಂಬೇಡ್ಕರ್ ಬಡಾವಣೆಯ ಸರ್ಕಾರಿ ಉರ್ದು ಪ್ರೌಢಶಾಲೆ, ಅಂಗನವಾಡಿ ಕೇಂದ್ರ, ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಮಧು ಬಂಗಾರಪ್ಪ ದಿಡೀರ್ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕುರಿತಂತೆ ಅಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಬುಧವಾರ ಉರ್ದು ಶಾಲೆಗೆ ಭೇಟಿ ನೀಡಿದ ಶಾಸಕರು, ಬಿಸಿಯೂಟ ತಯಾರಿಕೆ ಕೊಠಡಿಗೆ ತೆರಳಿ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿದರು.
ಮುಂದೆ ಯಾವುದೇ ಕಾರಣಕ್ಕೂ ಕಳಪೆ ತರಕಾರಿ, ಅಸ್ವಚ್ಛತೆ ಕಾಣಕೂಡದು ಎಂದು ಮುಖ್ಯೋಪಾಧ್ಯಾಯರಿಗೆ  ತಾಕೀತು ಮಾಡಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ: ನಂತರ ಅಲ್ಲಿಯೇ ಇರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಆಹಾರ ದಾಸ್ತಾನಿನ ಗುಣಮಟ್ಟ ಪರಿಶೀಲಿಸಿದರು. ಮಕ್ಕಳಿಗೆ ಮತ್ತು ಬಾಣಂತಿಯರಿಗೆ ನೀಡುವ ಹಾಲು ಪೌಡರ್, ಹೆಸರು ಕಾಳು, ಬೆಲ್ಲ, ಗೋದಿಹಿಟ್ಟು ಪ್ಯಾಕೇಟ್‌ಗಳು ತೂಕದಲ್ಲಿ ಕಡಿಮೆ, ಗುಣಮಟ್ಟ ಕಳಪೆ ಇರುವುದನ್ನು ಗಮನಿಸಿ, ಆಹಾರ ವಿತರಕರನ್ನು ವಿಚಾರಿಸಿದರು.
ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಚಿದಾನಂದಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ಸಮಗ್ರ ಮಾಹಿತಿ ನೀಡುವಂತೆ ತಿಳಿಸಿದರು.
ನಿಗಾವಹಿಸಲು ಸೂಚನೆ: ಅದೇ ಬಡಾವಣೆಯಲ್ಲಿರುವ ಪಜಾಪಪಂ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಕೊಠಡಿ, ಕಟ್ಟಡ ಪರಿಶೀಲಿಸಿದರು. ವಿದ್ಯಾರ್ಥಿನಿಯರ ಭದ್ರತೆ ಹಾಗೂ ಕೊಠಡಿ, ಶೌಚಾಲಯಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಸರ್ಕಾರ ಪೂರೈಸುತ್ತಿರುವ ಆಹಾರದಲ್ಲಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು.  ಶುದ್ಧ ತರಕಾರಿ ಬಳಸಿ ಎಂದು ಮೇಲ್ವಿಚಾರಕಿ ಲೋಬೋ ಅವರಿಗೆ ಮಾರ್ಗದರ್ಶನ ನೀಡಿದರು.  
ತಹಶೀಲ್ದಾರ್ ತೇಜಸ್ ಕುಮಾರ್, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಮಂಜುಳಾ, ಸಮಾಜ ಕಲ್ಯಾಣ ಅಧಿಕಾರಿ ರವಿಕುಮಾರ್, ಸಿಡಿಪಿಒ ಚಿದಾನಂದಪ್ಪ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಕಾರ್ಯಾಧ್ಯಕ್ಷ ಅತಿಕುರ್ ರೆಹಮಾನ್, ಟೌನ್ ಅಧ್ಯಕ್ಷ ಮಧುರಾಯ ಜಿ. ಶೇಟ್, ವಕ್ತಾರ ಎಂ.ಡಿ. ಶೇಖರ್, ಮಂಚಿ ಸೋಮಪ್ಪ, ಸಣ್ಣಬೈಲ್ ಪರಶುರಾಮಪ್ಪ, ಸಿರಾಜ್ ಅಹ್ಮದ್, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎನ್.ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement