ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾತ್ರಿ 10ರ ನಂತರ ಆಟೋ ವಂಚನೆ: ಎಚ್ಚರಿಕೆ

Vishwanath S
Updated On : 5 Sept 2013, 11:37 am

ಕ.ಪ್ರ.ವಾರ್ತೆ, ಶಿವಮೊಗ್ಗ, ಸೆ.4 ರಾತ್ರಿ 10 ಗಂಟೆ ನಂತರ ಕೆಲವು ಆಟೋದವರಿಂದ ವಂಚನೆ ನಡೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಆಟೋ ಮೀಟರ್‌ನಲ್ಲಿ ನಿರ್ಧರಿತ ಮೂಲ ಮೊತ್ತ (1.5ಕಿ.ಮೀ.ಗೆ ರು. 20)ಬದಲಾಗಿ ರಾತ್ರಿ 10 ಗಂಟೆ ನಂತರ ಒಂದೂವರೆ ಪಟ್ಟು ಹೆಚ್ಚು ಹಣ ನಮೂದಾಗಿ ಪ್ರದರ್ಶಿತವಾಗುತ್ತಿರುವ ಬಗ್ಗೆ ದೂರು ಕೇಳಿಬಂದಿದೆ.
ಈ ಬಗ್ಗೆ ದೂರು ಸ್ವೀಕರಿಸಿರುವ ಕಾನೂನು ಮಾಪನಶಾಸ್ತ್ರ ಇಲಾಖೆ ಆಟೋ ಚಾಲಕರಿಗೆ ಎಚ್ಚರಿಕೆ ಸಂದೇಶ ನೀಡಿದೆ.
ದುರಸ್ತಿ ಕಡ್ಡಾಯ: ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರು ತಮ್ಮ ಆಟೋ ರಿಕ್ಷಾಗಳ ಮೀಟರ್‌ಗಳನ್ನು ಹೊಸ ದರಕ್ಕೆ ಪರಿಷ್ಕರಣೆ ಮಾಡುವಾಗ ಮೀಟರ್‌ಗಳನ್ನು ರಾತ್ರಿ 10ಗಂಟೆ ನಂತರವೂ ಕೂಡ 1.5ಕಿ.ಮೀ.ಗೆ ರು. 20 ತೋರಿಸುವಂತೆ ದುರಸ್ತಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಇಲಾಖೆ ಹೇಳಿದೆ.
ಈಗಾಗಲೇ ಈ ರೀತಿ ದುರಸ್ತಿ ಮಾಡಿಕೊಂಡಿರುವ ಆಟೋರಿಕ್ಷಾದವರು ರಾತ್ರಿ 10ಗಂಟೆ  ಮೇಲೂ ಪ್ರತಿ 1.5ಕಿ.ಮೀ. ರು. 20 ತೋರಿಸುವಂತೆ ಪುನಃ ಸರಿಪಡಿಸಿಕೊಂಡು, ಈ ಕಚೇರಿಯಲ್ಲಿ ರು. 100 ಸತ್ಯಾಪನಾ ಶುಲ್ಕ ಪಾವತಿಸಿ, ಸತ್ಯಾಪನೆ ಮಾಡಿಸಿಕೊಂಡು ಪ್ರಮಾಣ ಪತ್ರ ಪಡೆಯಲು ಸೂಚಿಸಲಾಗಿದೆ. ರಾತ್ರಿ 10ಗಂಟೆ ಮೇಲೆ ಮೀಟರ್‌ಗಳು ಒಂದೂವರೆ ಪಟ್ಟು ತೋರಿಸಿದರೆ ಅಂತಹ ಮೀಟರ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.  ಹೊಸದರಕ್ಕೆ ದುರಸ್ತಿ ಮಾಡಿಸಿದ ನಂತರ ಪುನಃ ಮುದ್ರೆ ಮಾಡಿಸಿಕೊಂಡು ಸತ್ಯಾಪನೆ ಪಡೆಯದಿದ್ದರೆ ಕಕನಿಷ್ಠ ರು. 2,000 ದಂಡ ವಿಧಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement