ಅಮಾವಾಸ್ಯೆ ಅಂಗವಾಗಿ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಶಿರಾಳಕೊಪ್ಪ: ಶ್ರಾವಣಮಾಸದ ಅಮಾವಾಸ್ಯೆ ಅಂಗವಾಗಿ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಬಸವೇಶ್ವರನಿಗೆ ಹಾಗೂ ಈಶ್ವರನಿಗೆ ವಿಶೇಷ ಬೆಣ್ಣೆಪೂಜೆ, ಅಲಂಕಾರ ಸಹಿತ ಸಹಸ್ರ ಬಿಲ್ವಾರ್ಚನೆ ನಡೆಸಲಾಯಿತು. ಬಿಲ್ವಾರ್ಚನೆಯಲ್ಲಿ ಪಟ್ಟಣದ ಹಲವಾರು ಭಕ್ತರು ಸರತಿಯಲ್ಲಿ ಬಸವೇಶ್ವರನಿಗೆ ಬಿಲ್ವಾರ್ಚನೆ ನಡೆಸಿ ಪ್ರಾರ್ಥಿಸಿಕೊಂಡು ಪೂಜೆ ಸಲ್ಲಿಸಿದರು.
ಪಟ್ಟಣದ ಅಕ್ಕಮಹಾದೇವಿ ಸಮಿತಿಯ ಮಹಿಳೆಯರು ಕಾರ್ಯಕ್ರಮದಲ್ಲಿ ನಿರಂತರ ರುದ್ರಪಠಣ, ಸಹಸ್ರಸಂಖ್ಯೆಯಲ್ಲಿ ನಾಮಾವಳಿಯನ್ನು ಪಠಿಸುತ್ತಾ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಸಮಿತಿಯ ಅಧ್ಯಕ್ಷೆ ರೂಪ ಹಾಲೇಶಪ್ಪ, ಸಮಿತಿಯ ಪದಾಧಿಕಾರಿಗಳು, ಹೆಚ್.ಎಂ. ಗಂಗಮ್ಮ, ಮಹಿಳಾ ಮೇರ್ಚಾ ಅಧ್ಯಕ್ಷೆ ನಿವೇದಿತಾ ರಾಜು, ಪಪಂ ಮಾಜಿ ಅಧ್ಯಕ್ಷರು ಸದಸ್ಯರು ಹಾಗು ಪಟ್ಟಣದ ಪ್ರಮುಖರು ದೇವಸ್ಥಾನ ಸಮಿತಿಯವರು ಹಾಜರಿದ್ದರು.
ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.