ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಅಸಹಿಷ್ಣುತೆಯಿಂದಾಗಿ ಕೋಮು ಗಲಭೆ'

Vishwanath S
Updated On : 6 Sept 2013, 11:39 am

ಸಾಗರ: ಕೆಲವೇ ಕೆಲವು ವ್ಯಕ್ತಿಗಳ ಮನಸ್ಸಿನಲ್ಲಿ ಸುಪ್ತವಾಗಿರುವ ಅಸಹಿಷ್ಣುತೆಯಿಂದಾಗಿ ಕೋಮು ಗಲಭೆಯಂತಹ ಘಟನೆಗಳು ನಡೆಯುತ್ತಿವೆ ಎಂದು ರಂಗಕರ್ಮಿ ಡಾ. ಗುರುರಾವ್ ಬಾಪಟ್ ಹೇಳಿದರು.
ಇಲ್ಲಿನ ಎಂಡಿಎಫ್ ಸ್ವತಂತ್ರ ಪ.ಪೂ. ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ, ಕೋಮು ಗಲಭೆಯಂತಹ ಘಟನೆಯಲ್ಲಿ ಅಮಾಯಕರು ಜೀವ ಕಳೆದುಕೊಳ್ಳುತ್ತಿರುವುದು ಖೇದದ ಸಂಗತಿ ಎಂದರು.
ನಮ್ಮ ದೇಶದಲ್ಲಿ ವೈವಿಧ್ಯಮಯವಾದ ಜಾತಿ, ಭಾಷೆ, ಸಂಸ್ಕಣತಿ. ಧರ್ಮಗಳ ವ್ಯವಸ್ಥೆ ಇದೆ. ಈ ವೈವಿಧ್ಯಗಳ ನಡುವೆ ನಾವು ಒಟ್ಟಿಗೆ ಬದುಕುವುದನ್ನು ಕಲಿತಿದ್ದೇವೆ. ಆದರೆ, ಭಾಷೆ, ಧರ್ಮದ ಕಾರಣದಿಂದಾಗಿ ದಿನ ಬೆಳಗಾದರೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿರುವುದು ದುರದೃಷ್ಟಕರ.
   ದೇಶ ವಿಭಜನೆಯಂತಹ ಐತಿಹಾಸಿಕ ಸಂಗತಿಗಳು ಸಂಭವಿಸಿ ಎಷ್ಟೋ ವರ್ಷ ಕಳೆದರೂ ಸಾಮಾಜಿಕ ಜೀವನದಲ್ಲಿ ಅದು ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಇನ್ನೊಬ್ಬರ ಭಾಷೆ, ಧರ್ಮ, ಜೀವನ ಶೈಲಿಗಳನ್ನು ಗೌರವಿಸುವ ಮನೋಭಾವ ನಮ್ಮಲ್ಲಿ ಗಟ್ಟಿಗೊಳ್ಳಬೇಕು. ವಿದ್ಯಾರ್ಥಿ ಹಂತದಲ್ಲಿಯೇ ಶಾಂತಿ, ಸಹಬಾಳ್ವೆ ಹಾಗೂ ಪರಧರ್ಮ ಸಹಿಷ್ಣುತೆಯಂತಹ ಮನೋಭಾವ ಬೆಳೆಸಿಕೊಳ್ಳಬೇಕು.   ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು. ಪ್ರಾಚಾರ್ಯ ಶ್ರೀಪಾದ ಅಧ್ಯಕ್ಷತೆ ವಹಿಸಿದ್ದರು. ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿದ್ಯಾರ್ಥಿಗಳಾದ ಅಭಿಲಾಷಾ, ಸುಚಲಾ ಭಟ್, ದೀಕ್ಷಿತ್ ಸದ್ಭಾವನಾ ದಿನಾಚರಣೆಯ ಅಗತ್ಯ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement