ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಉಪನ್ಯಾಸಕರ ಸ್ಥಾನೀಕರಣ ಕಾಲಮಿತಿ ವಿಸ್ತರಣೆಗೆ ಆಗ್ರಹ

Vishwanath S
Updated On : 6 Sept 2013, 11:39 am

ಶಿವಮೊಗ್ಗ: ರಾಜ್ಯದ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡಲು ಖಾಲಿ ಇರುವ ಮಂಜೂರಾತಿ ಪಡೆದ ಭೋದಕ ಹಾಗೂ ಭೋದಕೇತರ ಹುದ್ದೆಗಳನ್ನು ತುಂಬಿಕೊಳ್ಳಲು ಪರವಾನಿಗೆ ನೀಡಬೇಕು ಎಂದು ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿತು.
 ಪ್ರೊ. ಹುಚ್ಚಯ್ಯ ಹಾಗೂ ಡಾ. ಬಾಲಕೃಷ್ಣ ಹೆಗಡೆ ನೇತೃತ್ವದ ನಿಯೋಗ ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಅರ್ಪಿಸಿತು. ಅನುದಾನಿತ ಕಾಲೇಜುಗಳಲ್ಲಿ ಮಂಜೂರಾತಿಯಾದ ಅನೇಕ ಹುದ್ದೆಗಳು ಖಾಲಿ ಇವೆ.
 ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಹಿಂದಿನ ಸರ್ಕಾರಗಳು ಆರ್ಥಿಕ ಮಿತವ್ಯಯ ಹೇರಿ ನೇಮಕಾತಿಗೆ ನಿರ್ಬಂದ ಹೇರಿದ್ದವು. ಆದರೆ ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರ ಆ ಮಿತವ್ಯಯ ನೀತಿಯನ್ನು ಹಿಂತೆಗೆದುಕೊಂಡು ನೇಮಕಾತಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಆರ್ಥಿಕ ಮಿತವ್ಯಯ: ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮಾತ್ರ ಅದನ್ನು ಜಾರಿಗೊಳಿಸಿ ಪದವಿ ಕಾಲೇಜುಗಳಿಗೆ ಅದನ್ನು ವಿಸ್ತರಿಸದೆ ಅನ್ಯಾಯವಾಗಿತ್ತು.
 ಆರ್ಥಿಕ ಮಿತವ್ಯಯವನ್ನು ಹಿಂತೆಗೆದುಕೊಂಡ ಆದೇಶವನ್ನು ಅನುದಾನಿತ ಪದವಿ ಕಾಲೇಜುಗಳಿಗೂ ವಿಸ್ತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸ್ಥಾನೀಕರಣ ನೀಡಿ: ಸ್ಥಾನೀಕರಣಕ್ಕೆ ಸಂಬಂಧಿಸಿದಂತೆ, 2010ರ ಆಗಸ್ಟ್ ಒಳಗೆ ಯಾರು ಅರ್ಹರಿದ್ದಾರೋ ಅವರಿಗೆ ಈ ಹಿಂದಿನ ಪದ್ಧತಿಯಂತೆ ಸ್ಥಾನೀಕರಣ ನೀಡಲಾಗಿದೆ.
  ಆದರೆ 2010ರ ಆಗಸ್ಟ್ ನಂತರದಲ್ಲಿ ಈ ಅರ್ಹತೆ ಹೊಂದಿರುವ ಉಪನ್ಯಾಸಕರಿಗೆ ಈ ಅವಕಾಶ ಕಲ್ಪಿಸಿಲ್ಲ. ಸ್ಟಾಪ್ ಗ್ಯಾಪ್, ಅರೆಕಾಲಿಕ ಉಪನ್ಯಾಸಕರಾಗಿ 10-12 ವರ್ಷ ಸೇವೆ ಸಲ್ಲಿಸಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಸೇವಾ ಖಾಯಮಾತಿ ಆದವರೂ ಅನೇಕರಿದ್ದಾರೆ. ಈ ಹಿನ್ನೆಲೆಯಲ್ಲಿ 2013ರ ಅಕ್ಟೋಬರ್ ವರೆಗೆ ಸ್ಥಾನೀಕರಣಕ್ಕೆ ಅರ್ಹರಾಗುವ ಎಲ್ಲರಗೂ ಈ ಹಿಂದಿನ ಪದ್ಧತಿಯಂತೆ ಸ್ಥಾನೀಕರಣ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
 ಪ್ರತಿ ತಿಂಗಳೂ ವೇತನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದ್ದು ಸರ್ಕಾರಿ ಕಾಲೇಜು ಉಪನ್ಯಾಸಕರಿಗೆ ನೀಡುವಂತೆ ತಮಗೂ ಒಂದನೇ ತಾರಿಖಿಗೆ ವೇತನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರ ಜತೆ ಚರ್ಚಿಸಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement