ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ಶಿಕ್ಷಕ- ಶಿಲ್ಪಿ ವಿಚಾರ ಸಂಕಿರಣ

Lingaraj Badiger
Updated On : 7 Sept 2013, 10:46 am

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ಶಿವಮೊಗ್ಗ ರಾಮ ಮನೋಹರ ಲೋಹಿಯಾ ನಗರದ ಅಲ್ ಮಹಮೂದ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದೊಂದಿಗೆ ಶಿಕ್ಷಕ ದಿನಾಚರಣೆಯ ಅಂಗವಾಗಿ ಸೆ.7ರಂದು ಅಲ್ ಮಹಮೂದ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶಿಕ್ಷಕ-ಶಿಲ್ಪಿ, ವ್ಯಕ್ತಿತ್ವ-ನಡತೆ-ನೈತಿಕತೆ-ಪ್ರಾಮಾಣಿಕತೆ ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
ವಿಚಾರ ಸಂಕಿರಣಕ್ಕೆ ಸಾಹಿತಿ ಪ್ರೊ. ಸತ್ಯನಾರಾಯಣರಾವ್ ಅಣತಿ ಅವರು ಚಾಲನೆ ನೀಡುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ್ ಡಿ. ಅಧ್ಯಕ್ಷತೆ ವಹಿಸುವರು. ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಕುಬೇರಪ್ಪ, ತಾ. ಕಸಾಪ ಅಧ್ಯಕ್ಷೆ ಶೀಲಾ ಸುರೇಶ್ ಉಪಸ್ಥಿತರಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement