ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಧರ್ಮಪಾಲನೆಯಲ್ಲಿ ಆಧ್ಯಾತ್ಮದ ಪಾತ್ರ ಮಹತ್ವದ್ದು'

Lingaraj Badiger
Updated On : 7 Sept 2013, 10:45 am

ಕ.ಪ್ರ.ವಾರ್ತೆ, ಸಾಗರ,  ಸೆ.6
ಆಧ್ಯಾತ್ಮ ಭಾರತ ದೇಶದ ಅಗೋಚರ ಶಕ್ತಿಯಾಗಿದ್ದು, ಧರ್ಮಪರಿಪಾಲನೆಯಲ್ಲಿ ಆಧ್ಯಾತ್ಮದ ಸಹಕಾರವಿದ್ದಾಗ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದು ಕೆಳದಿ ರಾಜುಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ಬಂದಗದ್ದೆ ಕೆಳದಿ ರಾಜುಗುರು ಹಿರೇಮಠದಲ್ಲಿ ಶುಕ್ರವಾರ ಡಾ. ಗುರುಸಿದ್ದದೇವ ಶಿವಾಚಾರ್ಯ ಸ್ವಾಮಿಗಳ ನಾಲ್ಕನೇ ಪುಣ್ಯಾರಾಧನೆ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಕಷ್ಟದಲ್ಲಿರುವವರಿಗೆ ನೆರವಾಗಿ: ಮನುಷ್ಯ ಜನ್ಮ ಪೂರ್ವಜನ್ಮದ ಪುಣ್ಯಫಲವಾಗಿದ್ದು, ಈ ಜನ್ಮದಲ್ಲಿಯೂ ನಾವು ಒಂದಷ್ಟು ಸಾರ್ಥಕ ಕೆಲಸಗಳನ್ನು ಮಾಡಿದರೆ ಮೋಕ್ಷ ಸಾಧ್ಯವಾಗುತ್ತದೆ. ನಾನು, ನನ್ನದು ಎನ್ನುವ ಸಂಕುಚಿತ ಮನೋಭಾವ ಬಿಟ್ಟು ಸಮಷ್ಟಿಹಿತದ ಚಿಂತನೆ ಬೆಳೆಸಿಕೊಳ್ಳಬೇಕು. ನೆರೆಹೊರೆಯವರಿಗೆ ಹೊರೆಯಾಗದೆ ಅವರ ಕಷ್ಟದಲ್ಲಿ ಪಾಲ್ಗೊಳ್ಳುವುದು. ನೋವಿನಲ್ಲಿರುವವರಿಗೆ ಸಂತೈಸುವ ಕೆಲಸವನ್ನು ಮಾಡಬೇಕು ಎಂದರು.
ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿ ಆತ್ಮ ಇರುತ್ತದೆ. ನಮ್ಮ ಆತ್ಮತೃಪ್ತಿಗಾಗಿ ನಾವು ಒಂದಿಷ್ಟು ಒಳ್ಳೆಯ ಕೆಲಸವನ್ನು ಮಾಡಲೆ ಬೇಕಾಗುತ್ತದೆ. ಕೈಯೆತ್ತಿ ಕೊಟ್ಟಾಗ ಸಿಗುವ ಸಾರ್ಥಕತೆ, ಗಳಿಸಿ, ಉಳಿಸಿಕೊಂಡರೆ ಸಿಗುವುದಿಲ್ಲ. ಆಧುನಿಕತೆಯತ್ತ ಮುಖ ಮಾಡಿರುವ ಮನುಷ್ಯ ದೇವರು, ಧರ್ಮ, ಮಠಮಂದಿರಗಳನ್ನು ಮರೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ರಂಭಾಪುರಿ ಶಾಖಾ ಮಠದ ಶ್ರೀಕ್ಷೇತ್ರ ದುಗ್ಲಿಯ ಶ್ರೀ ಮುರುಗೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಬೆಳಗಾವಿ ಜಿಲ್ಲೆ ಮುತ್ನಾಳು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement