ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೊಳೆರೋಗ ಪರಿಹಾರ ಬಿಡುಗಡೆ: ಕಾಗೋಡುಗೆ ಅಭಿನಂದನೆ

Mainashree
Updated On : 9 Sept 2013, 12:14 pm

ಸಾಗರ: ಪ್ರಾಂತ್ಯ ಅಡಕೆ ಬೆಳೆಗಾರರ ನಿಯೋಗಕ್ಕೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿಗಳು ಬೆಳೆನಷ್ಟ ಪರಿಹಾರಕ್ಕೆ 73 ಕೋಟಿ ಬಿಡುಗಡೆಗೊಳಿಸಿ ಆದೇಶ ನೀಡಿರುವುದಕ್ಕೆ ಹಾಗೂ ನಷ್ಟಕ್ಕೆ ಒಳಗಾದ ಅಡಕೆ ಬೆಳೆಗಾರರ ಬಗ್ಗೆ ತುಂಬ ಕಾಳಜಿಯಿಂದ ಸರ್ಕಾರದ ಗಮನ ಸೆಳೆದು ಬೆಳೆಗಾರರ ಬವಣೆಯನ್ನು ಸರ್ಕಾರಕ್ಕೆ ತಿಳಿಸುವಲ್ಲಿ ಪ್ರಮುಖಪಾತ್ರ ವಹಿಸಿರುವ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಬೆಳೆಗಾರರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳು ಹಾನಿಗೊಳಗಾದ ಬೆಳೆಗೆ ಹೆಕ್ಟೇರಿಗೆ 12 ಸಾವಿರ ಮಾತ್ರ ಪರಿಹಾರ ನೀಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ನಿಧಿ ಮಾರ್ಗಸೂಚಿಯನ್ವಯ ಸೂಚನೆ ನೀಡಿದ್ದಾರೆ. ಈ ಪರಿಹಾರವು ತೀರ ಕಡಿಮೆಯಾಗಿದ್ದು, ಹೆಕ್ಟೇರಿಗೆ ಕನಿಷ್ಠ 50 ಸಾವಿರ ಪರಿಹಾರ ನೀಡಬೇಕು ಎಂದು ಸಂಘವು ಒತ್ತಾಯಿಸುತ್ತದೆ.
ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗೋರಕ್‌ಸಿಂಗ್ ವರದಿಯಂತೆ ಸಾಲಮನ್ನ ಮಾಡಲು ಒಪ್ಪಿದ್ದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದ್ದಾರೆ. ಅಡಕೆ ಬೆಳೆಗಾರರ ವಾಸ್ತವಾಂಶವನ್ನು ಸರ್ಕಾರ ಅರಿತು ವಿಳಂಬ ಮಾಡದೆ ಅಡಕೆ ಬೆಳೆಗಾರರ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ಬಾಕಿ ಇರುವ ಸಾಲಗಳನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement