14ರಂದು ಸೊಸೈಟಿ ಸದಸ್ಯರ ಸಭೆ
ಶಿವಮೊಗ್ಗ: ಶ್ರೀ ಕಂಚಿಕಾಮಾಕ್ಷಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಸೆ.14ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಕಾಮಾಕ್ಷಿ ಸರ್ವಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೊಸೈಟಿಯ ಸರ್ವ ಸದಸ್ಯರ ಸಭೆ ಕರೆದಿದೆ. ಇದೇ ವೇಳೆ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸೊಸೈಟಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಆಸಕ್ತರು ತಮ್ಮ ಭಾವಚಿತ್ರ ಮತ್ತು ಅಂಕಪಟ್ಟಿಯ ನಕಲನ್ನು ಸೊಸೈಟಿಗೆ ಕಳುಹಿಸಬಹುದು ಎಂದು ಸೊಸೈಟಿಯ ಅಧ್ಯಕ್ಷ ವಿ. ರಾಜು ತಿಳಿಸಿದ್ದಾರೆ.
8ನೇ ದಿನಕ್ಕೆಕಾಲಿಟ್ಟ ಮುಷ್ಕರ
ಶಿವಮೊಗ್ಗ: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಶುವೈದ್ಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿಯು ಬುಧವಾರ 8ನೇ ದಿನಕ್ಕೆ ಕಾಲಿಟ್ಟಿದೆ. ಸಂಬಂಧಪಟ್ಟವರು ಈ ಸಮಸ್ಯೆ ನಿವಾರಿಸುವತ್ತ ಗಮನ ಹರಿಸದ ಕಾರಣ ಧರಣಿ ಮುಂದುವರಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮಾನ್ಯತೆ ಸಿಗದ ಕಾರಣ ಭವಿಷ್ಯಕ್ಕೆ ಆಗಿರುವ ತೊಂದರೆಯನ್ನು ಗಮನಕ್ಕೆ ತಂದರು.