ಇಂದಿನಿಂದ ರಾಜ್ಯ ಮಟ್ಟದಬ್ಯಾಡ್ಮಿಂಟನ್ ಪಂದ್ಯಾವಳಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಟಣ.11 ಜಿಲ್ಲಾ ಒಲಂಪಿಕ್ ಸಂಸ್ಥೆ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ಸೆ.12ರಿಂದ 19ರವರೆಗೆ ಲೀನಿಂಗ್ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಯೋಜಕ ಸಮಿತಿ ಕಾರ್ಯಾಧ್ಯಕ್ಷ ಡಿ.ಎಸ್. ಅರುಣ್, ಈ ಪಂದ್ಯಾವಳಿಯು 13, 15, 17 ಮತ್ತು 19 ವಯೋವುತಿಯೊಳಗಿನ ಬಾಲಕ, ಬಾಲಕಿಯರು, ಪುರುಷರು, ಮಹಿಳೆಯರು ಮತ್ತು ಹಿರಿಯರ ವಿಭಾಗದಲ್ಲಿ ಸಿಂಗಲ್ಸ್, ಡಬಲ್ಸ್ ಮತ್ತು ವಿಕ್ಸ್ಡ್ ಡಬಲ್ಸ್ ಶ್ರೇಣಿಯಲ್ಲಿ ಪಂದ್ಯಗಳು ನಡೆಯಲಿದೆ.
ಒಟ್ಟು 527 ಕ್ರೀಡಾಪಟುಗಳು ಎಲ್ಲಾ ವಿಭಾಗಗಳಿಂದ ಸ್ಪರ್ಧಿಸಲಿದ್ದು, ವಿಜೇತರಾದವರಿಗೆ ನಗದು ಬಹುಮಾನ ರು. 2 ಲಕ್ಷ ವಿತರಿಸಲಾಗುವುದು ಎಂದು ತಿಳಿಸಿದರು.
6 ಕೋರ್ಟ್: ಟೂರ್ನಿಯಲ್ಲಿ ಶ್ರೇಯಾಂಕಿತ ಆಟಗಾರರಾದ ರೋಹನ್ ಕ್ಯಾಸ್ಟಲಿನೋ, ಸೂರಜ್ ಆರ್ಯನ್, ಅಭಿಷೇಕ್ ಎಲಿಗಾರ್, ಮಹಿಳಾ ಕ್ರೀಡಾಪಟು ಮೀರಾ ಮಹದೇವನ್, ರೂಪ್ ಮಿಶ್ರಾ, ಸವಿತಾ ಆರ್ಯನ್ ಸೇರಿದಂತೆ ಹಲವರು ಪಾಲ್ಗೊಳ್ಳುವರು. ಕ್ರೀಡಾಂಗಣದ 6 ಕೋರ್ಟ್ಗಳಲ್ಲಿ ನಿಗದಿತ ಸಮಯದಲ್ಲಿ ಪಂದ್ಯಗಳು ನಡೆಯಲಿದೆ ಎಂದು ತಿಳಿಸಿದರು.
12ರಂದು ಬೆಳಗ್ಗೆ 9.30ಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಪ್ರಸನ್ನನಾಥ ಶ್ರೀ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿಪ ಸಭಾಪತಿ ಡಿ.ಎಚ್. ಶಂಕರಮೂರ್ತಿ ಪಂದ್ಯಾವಳಿಗೆ ಚಾಲನೆ ನೀಡುವರು. 15ರಂದು ಸಂಜೆ 6 ಗಂಟೆಗೆ ಮುಕ್ತಾಯ ಸಮಾರಂಭವಿದ್ದು, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಬಹುಮಾನ ವಿತರಣೆ ಮಾಡುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಒಲಂಪಿಕ್ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಶಶಿ, ಆದಿತ್ಯ, ಎಂ.ವೈ. ನವೀನ್, ಕಿರಣ್ ಇದ್ದರು.