ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ಪಲ್ಲವಿ ಚಲನಚಿತ್ರ ಪ್ರದರ್ಶನ

Rashmi Kasaragodu
Updated On : 12 Sept 2013, 11:12 am

ಸಾಗರ: ಇಲ್ಲಿನ ಸ್ಪಂದನ ರಂಗ ತಂಡದ ತಿಂಗಳ ಸಂಕಿರಣ ಕಾರ್ಯಕ್ರಮದ ಅಂಗವಾಗಿ ಸೆ. 12ರಂದು ಸಂಜೆ 7ಕ್ಕೆ ಶಿವಪ್ಪನಾಯಕ ಬಡಾವಣೆಯಲ್ಲಿರುವ ಭೂಮಿ ರಂಗಮನೆಯಲ್ಲಿ ಪಿ. ಲಂಕೇಶ್ ನಿರ್ದೇಶನದ ಪಲ್ಲವಿ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ರಾಜೀವ್ ತಾರಾನಾಥ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ಟಿ.ಎನ್. ಸೀತಾರಾಂ, ವಿಮಲಾ ನಾಯ್ಡು ಮತ್ತಿತರರು ಅಭಿನಯಿಸಿದ್ದಾರೆ.
ವಿಶ್ವೇಶ್ವರಾಯನವರ 153ನೇ ಜಯಂತಿ
ಭದ್ರಾವತಿ: ವಿಐಎಸ್ಎಲ್ ನಿವೃತ್ತ ಉದ್ಯೋಗಿಗಳ ಕಲ್ಯಾಣ ಕೇಂದ್ರದ ವತಿಯಿಂದ ಭಾನುವಾರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಜಯಶ್ರೀ ಕಲ್ಯಾಣ ಮಂಟಪದಲ್ಲಿ ಸರ್ ಎಂ. ವಿಶ್ವೇಶ್ವರಾಯನವರ 153ನೇ ಜಯಂತಿ ಹಾಗೂ ಕೇಂದ್ರದ ಸಕಲ ಸದಸ್ಯರ ಸಭೆಯನ್ನು ಆಯೋಜಿಸಲಾಗಿದೆ. ಶಾಸಕ ಎಂ.ಜೆ.ಅಪ್ಪಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕೇಂದ್ರದ ಅಧ್ಯಕ್ಷ ಜೆ.ಎಸ್. ನಾಗಭೂಷಣ ಅಧ್ಯಕ್ಷತೆ ವಹಿಸುವರು. ಸದಸ್ಯರೆಲ್ಲರಿಗೂ ಈಗಾಗಲೇ ಆಹ್ವಾನ ಮತ್ತು ಸಭೆಯ ನೋಟಿಸನ್ನು ಕಳಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಬಿ.ಯಲ್ಲಪ್ಪ ವಿನಂತಿಸಿದ್ದಾರೆ.
ನಾಳೆ ಆನವಟ್ಟಿಗೆ ವಿವೇಕಾನಂದ ರಥಯಾತ್ರೆ
ಸೊರಬ: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಆಯೋಜಿಸಿರುವ ವಿವೇಕಾನಂದ ರಥಯಾತ್ರೆ ಸೆ.13ರಂದು ಆನವಟ್ಟಿಗೆ ಆಗಮಿಸಲಿದೆ. ಅಂದು ಮಧ್ಯಾಹ್ನ 2.30ಕ್ಕೆ ವಿಠ್ಠಲ ರುಖಮಾಯಿ ದೇವಸ್ಥಾನದಿಂದ ಶೋಭಾಯಾತ್ರೆ ನಂತರ ಸಪಪೂ ಕಾಲೇಜು ಆವರಣದಲ್ಲಿ ವಿವೇಕ ವಿಚಾರ ಜಾಗೃತಿ ಸಭೆ ನಡೆಯಲಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement