ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಧ್ವನಿವರ್ಧಕ ನಿರ್ಬಂಧಕ್ಕೆ ವಿರೋಧ

Rashmi Kasaragodu
Updated On : 12 Sept 2013, 11:12 am

ಶಿಕಾರಿಪುರ: ಶಾಂತಿ ನೆಪದಲ್ಲಿ ಹಿಂದೂಗಳ ದೊಡ್ಡ ಹಬ್ಬಗಳನ್ನು ವಿವಿಧ ಕ್ಷುಲ್ಲಕ ಕಾರಣಗಳ ಮೂಲಕ ಹತ್ತಿಕ್ಕುವ ವ್ಯವಸ್ಥಿತ ಸಂಚು ಸರ್ಕಾರಿ ಅಧಿಕಾರಿಗಳಿಂದ ನಿರಂತವಾಗಿ ನಡೆಯುತ್ತಿದ್ದು, ಇದೀಗ ಗಣೇಶ ವಿಸರ್ಜನೆ ಸಂದರ್ಭದಲ್ಲಿಯೂ ಧ್ವನಿವರ್ಧಕ ಬಳಸದಂತೆ ನಿರ್ಭಂದಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಜಿಲ್ಲಾಡಳಿತ ನಡೆಸುತ್ತಿದೆ ಎಂದು ಪುರಸಭಾ ಸದಸ್ಯ ಹಾಗೂ ರಾಘವೇಂದ್ರ ಬಡಾವಣೆ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಹುಲ್ಮಾರ್ ಆರೋಪಿಸಿದರು.
ಬುಧವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಜಿಲ್ಲಾಡಳಿತ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಧ್ವನಿವರ್ಧಕ ಬಳಸದಂತೆ ನಿರ್ಭಂದಿಸಿರುವ ಕ್ರಮ ವಿರೋಧಿಸಿ, ತಾಲೂಕಿನ ವಿವಿಧ ಗಣಪತಿ ಸೇವಾ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮೂಹಿಕ ಆಚರಣೆ: ಜಾತ್ಯತೀತ ದೇಶ ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ ಸಹಿತ ಎಲ್ಲಾ ವರ್ಗದ ಜನ ಸಾಮೂಹಿಕವಾಗಿ ಪಾಲ್ಗೊಂಡು ಆಚರಿಸುತ್ತಿರುವ ಏಕೈಕ ಹಬ್ಬವಾಗಿರುವ ಗಣೇಶೋತ್ಸವ ಅನಾದಿ ಕಾಲದಿಂದ ಬಹು ವಿಜೃಂಭಣೆ ಹಾಗೂ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದರು.
ಇದೀಗ ಜಿಲ್ಲಾಧಿಕಾರಿಗಳು ವಿನಾಯಕ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ  ಡಿ.ಟಿ.ಎಸ್ ಮತ್ತಿತರ ಧ್ವನಿವರ್ಧಕ ಬಳಸದಂತೆ ಪರವಾನಗಿ ನೀಡದೆ ನಿರ್ಭಂದಿಸಿ ಆದೇಶಿಸಿದ್ದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದರು.
ಇಂತಹ ಆದೇಶಗಳು ಇತ್ತೀಚಿನ ವರ್ಷದಲ್ಲಿ ಸಾಮಾನ್ಯವಾಗಿದ್ದು, ಕ್ಷುಲ್ಲಕ ಕಾರಣಗಳ ಮೂಲಕ ಬಹು ಸಂಖ್ಯಾತರ ದೊಡ್ಡ ಹಬ್ಬಗಳನ್ನು ಹತ್ತಿಕ್ಕುವ ವ್ಯವಸ್ಥಿತ ಸಂಚು ಅಧಿಕಾರಿಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
 ನಂತರ ಧ್ವನಿವರ್ಧಕ ಬಳಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಸುರೇಶ್ ದಾರವಾಡದ, ಮಧು ಹುಲ್ಮಾರ್, ನಾಗರಾಜ್, ಬಸವರಾಜ್, ರವಿಸಿಂಗ್, ಸತೀಶ್ ಗೊಲ್ಲರ್, ಹರೀಶ್,ರವಿ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement