ಶಿರಾಳಕೊಪ್ಪ ಪಪಂ ಅಧ್ಯಕ್ಷ ಆಯ್ಕೆ ಮುಂದೂಡಿಕೆ
ಶಿರಾಳಕೊಪ್ಪ: ಸೆ.20ರಂದು ನಡೆಯಬೇಕಿದ್ದ ಶಿರಾಳಕೊಪ್ಪ ಪಪಂ ಅಧ್ಯಕ್ಷ ಮತ್ತು ಉಪಾಧ್ಯಾಕ್ಷ ಚುನಾವಣೆಯನ್ನು ಸರ್ಕಾರದ ಆದೇಶದಂತೆ ಮತ್ತೆ ಮುಂದೆ ಹೋಗಿದೆ. ಈ ಮೊದಲು ರಾಜ್ಯದಲ್ಲಿ ಕೆಲವರು ಉಚ್ಚನ್ಯಾಯಾಲಯದಲ್ಲಿ ಮೀಸಲಾತಿ ಕುರಿತು ಪ್ರಶ್ನಿಸಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪಪಂ ಹಾಗು ಪುರಸಭೆ ಚುನಾವಣೆಗಳು ಮುಂದೆ ಹೋಗುತ್ತವೆ ಎಂಬ ಆತಂಕವಿತ್ತು. ಆದರೆ ಆ ಆತಂಕ ದೂರವಾಯಿತು ಎಂದು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸಿದ್ದರಾಗುತ್ತಿದ್ದರುವಾಗಲೇ ಬುಧವಾರ ಆಗಮಿಸಿದ ಸರ್ಕಾರದ ಸುತ್ತೋಲೆಯ ಪ್ರಕಾರ ಮತ್ತೆ ಚುನಾವಣೆ ಮುಂದೆ ಹೋಗಿದೆ.
ನಗರಾಭಿವ್ರದ್ದಿ ಇಲಾಖೆಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಕಳಿಸಿರುವ ಸುತ್ತೋಲೆಯಲ್ಲಿ ಯಾವ ಪಂಚಾಯ್ತಿಗಳು ದಿ.2-9-2013ಕ್ಕೆ ಮುಂಚಿತವಾಗಿ ಚುನಾವಣೆ ನಡೆಸಲು ವೇಳಾ ಪಟ್ಟಿಯನ್ನು ಹೊರಡಿಸಿರುತ್ತಾರೋಅಂತಹ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯನ್ನು ಮುಂದುವರೆಸಬಹುದು ಎಂದು ತಿಳಿಸಿದೆ.