ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

15ಕ್ಕೆ ಜಯ ಕರ್ನಾಟಕ ಘಟಕ ಉದ್ಘಾಟನೆ

Lingaraj Badiger
Updated On : 13 Sept 2013, 11:03 am

ಸಾಗರ: ನಾಡುನುಡಿ, ನೆಲಜಲದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಹಾಗೂ ಸ್ಥಳೀಯ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಮುತ್ತಪ್ಪ ರೈ ಅಧ್ಯಕ್ಷತೆಯ ಜಯ ಕರ್ನಾಟಕ ಯುವ ಘಟಕವನ್ನು ಉಳ್ಳೂರಿನಲ್ಲಿ ಸ್ಥಾಪಿಸಲಾಗಿದೆ ಎಂದು ಘಟಕದ ಗೌರವಾಧ್ಯಕ್ಷ ಎ.ಸಿ. ಮಂಜುನಾಥ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಕದ ಉದ್ಘಾಟನಾ ಸಮಾರಂಭವನ್ನು ಸಾಮಾಜಿಕ ಚಟುವಟಿಕೆ ಮೂಲಕ ಹಮ್ಮಿಕೊಳ್ಳಲಾಗಿದ್ದು, ಸೆ.15ರಂದು ಉಳ್ಳೂರಿನ ಸಿಗಂದೂರೇಶ್ವರಿ ಕಾಲೇಜು ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸುರೇಶ್ ರೈ ಉದ್ಘಾಟಿಸುವರು. ಜಿಲ್ಲಾ ಘಟಕದ ಕಾರ್ಯಧ್ಯಕ್ಷ ಸುರೇಶ್ ಶೆಟ್ಟಿ, ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಬಿಳಿಗಲ್ಲೂರು, ಉಳ್ಳೂರು ಗ್ರಾಪಂ ಅಧ್ಯಕ್ಷ ಮಂಜಪ್ಪ, ಉಳ್ಳೂರು ಚಂದ್ರು, ತಿರುಮಲ, ಅಕ್ಷರ, ಪರಮೇಶ್ವರ್, ರಾಮು ಇತರರು ಪಾಲ್ಗೊಳ್ಳುವರು.

ನಗರ ಕಾರ್ಯಕ್ರಮ
ಶಿವಮೊಗ್ಗ: ವಾಹನ ಚಾಲಕರ ಹಿತರಕ್ಷಣಾ ವೇದಿಕೆ- ವೇದಿಕೆ ಉದ್ಘಾಟನಾ ಸಮಾರಂಭ- ಕಿಮ್ಮನೆ ರತ್ನಾಕರ್, ಮುಖ್ಯಅತಿಥಿ- ಕೆ.ಎಸ್. ಈಶ್ವರಪ್ಪ, ಬಿ.ವೈ. ರಾಘವೇಂದ್ರ, ಆಯನೂರು ಮಂಜುನಾಥ್ ಮತ್ತಿತರರು, ಅಧ್ಯಕ್ಷತೆ- ಡಿ. ರಾಜಶೇಖರ್, ಸ್ಥಳ- ಕುವೆಂಪು ರಂಗಮಂದಿರ, ಸಮಯ- ಸಂಜೆ 5ಕ್ಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement